ಕೂಗು ನಿಮ್ಮದು ಧ್ವನಿ ನಮ್ಮದು

ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್, ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

ಬೆಂಗಳೂರು: ಸರ್ಕಾರಿ ಭರವಸೆಗಳ ಸಮಿತಿ ಸದಸ್ಯರು ಸರ್ಕಾರಿ ದುಡ್ಡಿನಲ್ಲಿ ಲೇಹ್ ,ಲಡಾಕ್‍ನಲ್ಲಿ ಫ್ಯಾಮಿಲಿ ಟೂರ್ ಮಾಡುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.ಮತ್ತಷ್ಟು ಸಮಿತಿಗಳು ಬೇರೆ ಬೇರೆ ರಾಜ್ಯಗಳಿಗೆ ಸ್ಟಡಿ ಟೂರ್ ಮಾಡಲು ಪ್ಲಾನ್ ಮಾಡ್ಕೊಂಡಿದ್ದವು. ಆದರೆ ಭರವಸೆಗಳ ಸಮಿತಿಯ ಲೇಹ್,ಲಡಾಕ್ ಟೂರ್ ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಉಳಿದ ಸಮಿತಿಗಳು ಸದ್ದಿಲ್ಲದೇ ತಮ್ಮ ಟೂರ್ ಪೋಸ್ಟ್ ಪೋನ್ ಮಾಡಿಕೊಂಡಿವೆ. 

ಇಷ್ಟೇ ಅಲ್ಲ ಖುದ್ದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿದ್ದಾರೆ. ಉಳಿದ ಸಮಿತಿಗಳ ಅನ್ಯ ರಾಜ್ಯ ಟೂರ್ ಪ್ಲಾನ್ ಗೊತ್ತಾಗಿದ್ದೇ ತಡ ಅದಕ್ಕೆ ಸ್ಪೀಕರ್ ಕಾಗೇರಿ ಬ್ರೇಕ್ ಹಾಕಿದ್ದಾರೆ. ಸದ್ಯಕ್ಕೆ ಯಾವುದೇ ಟೂರ್ ಪ್ಲಾನ್ ಹಾಕಿಕೊಳ್ಳದಂತೆ ಸಮಿತಿಗಳ ಅಧ್ಯಕ್ಷರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಈ ನಡುವೆ ಲೇಹ್ ,ಲಡಾಕ್‍ನಲ್ಲಿ ಶಾಸಕರು ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಜಾಲಿಯಾಗಿ ಸುತ್ತಾಡ್ತಿದ್ದು, ಗ್ರೂಪಲ್ಲಿ ಫೋಟೋ ಶೂಟ್ ಸಹ ಮಾಡ್ಕೊಳ್ತಿದ್ದಾರೆ.

error: Content is protected !!