ಕೂಗು ನಿಮ್ಮದು ಧ್ವನಿ ನಮ್ಮದು

ಟೋಲ್ ಸಿಬ್ಬಂದಿ ಜೊತೆ ವಾಹನ ‌ಸವಾರರ ಮಾತಿನ ಚಕಮಕಿ

ಮಂಡ್ಯ: ನೂತನ ದಶಪಥ ರಸ್ತೆಯ ಶ್ರೀರಂಗಪಟ್ಟಣ ‌ತಾಲೂಕಿನ ಗಣಂಗೂರು ಟೋಲ್ ಪ್ಲಾಜಾ ಬಳಿ ಎರಡನೇ ಹಂತದ ಟೋಲ್ ಸಂಗ್ರಹ ಆರಂಭವಾಗಿದೆ. ಟೋಲ್ ಪ್ಲಾಜಾ ಬಳಿ ಡಿಎಆರ್ ವಾಹನ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಟೋಲ್ ದರ ವಿರೋಧಿಸಿ ನಿನ್ನೆ ರಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಇಂದು ಟೋಲ್ ಪ್ಲಾಜಾದಲ್ಲಿ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ. ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗಲು ವಿಳಂಬವಾಗುತ್ತಿದೆ. ಇದರಿಂದ ಟೋಲ್ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟೋಲ್ ಸಿಬ್ಬಂದಿ ಜೊತೆ ವಾಹನ ‌ಸವಾರರ ಮಾತಿನ ಚಕಮಕಿ ನಡೆದಿದೆ.

error: Content is protected !!