ಚಿತ್ರದುರ್ಗ: ನಾನು ಸಹ ದೆಹಲಿಗೆ ಹೋಗಿ ರಾಜಕೀಯ ಮಾಡುವುದನ್ನು ಕಲಿಯಬೇಕು, ಎಂದಿರುವ ಚಿತ್ರದುರ್ಗ ಕ್ಷೇತ್ರದ ಹಿರಿಯ BJP ಶಾಸಕ J.H ತಿಪ್ಪಾರೆಡ್ಡಿ ಇನ್ನೂಚಿತ್ರದುರ್ಗದ VIP ಪ್ರವಾಸಿ ಮಂದಿರವನ್ನು ಉದ್ಘಾಟಿನೆ ಮಾಡಿದ ನಂತರ ಮಾತನಾಡಿರುವ ತಿಪ್ಪಾರೆಡ್ಡಿ ಅವರು, ಮೇಲ್ಮಟ್ಟದಲ್ಲಿ ರಾಜಕೀಯ ಮಾಡುವುದು ನೀವು ಕಲಿತಿಲ್ಲ. ಇದೊಂದೇ ನಿಮ್ಮ ಕುಟುಂಬದಲ್ಲಿ ಡಿಫೆಕ್ಟ್ ಇದೆ ಎಂದು ಕಳೆದ ವರ್ಷವೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೆ ಹೇಳಿದ್ರು. ಹಾಗಾಗಿ ನಾನೂ ಸಹ ದೆಹಲಿಗೆ ಹೋಗಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಪ್ಪಾರೆಡ್ಡಿಯವರು ಹೇಳಿದ್ರು.
ಇನ್ನೂ ಬಾರಿಯೂ ಸಚಿವ ಸ್ಥಾನ ಸಿಗುವುದೆಂಬ ನಿರೀಕ್ಷೆಯಿಂದ ನಾನು ಇವಾಗ ಬೆಂಗಳೂರಿಗೆ ಓಡಾಡುತ್ತಿದ್ದೇನೆ. ಇನ್ನೂ ಈ ವಿಚಾರವಾಗಿ ದೆಹಲಿಗೂ ಸಹ ಹೋಗಿ ಬರುವ ಬಗ್ಗೆಯೂ ವಿಚಾರ ಮಾಡುತ್ತಿದ್ದೇನೆ. ಜೊತೆಗೆ ಈ ಬಾರಿಯೂ ನನಗೆ ಸಚಿವಗಿರಿ ಪಟ್ಟವನ್ನು ಕೊಟ್ರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಜೊತೆ ನಾನು ಖುಷಿಯಾಗಿ ಕೆಲಸ ಮಾಡುತ್ತೇನೆ. ಎಂದು ಹೇಳಿದ್ರು ಜೊತೆಗೆ ಈ ಬಾರಿ ಸಂಪುಟ ರಚನೆಯಲ್ಲಿ ಕೇಂದ್ರ ಮಾದರಿ ಸಚಿವ ಸಂಪುಟ ಜಾರಿ ಆಗುವ ನಂಬಿಕೆ ಇದ್ದು, ಸಾಮಾಜಿಕ ನ್ಯಾಯದ ಅಡಿ ನಮಗೂ ಸಚಿವ ಸ್ಥಾನ ಸಿಗುವಂತ ಭರವಸೆ ಇದೆ ಎಂದಿದ್ದಾರೆ. ಇನ್ನೂ ನಮ್ಮ ಜಿಲ್ಲೆಗೂ ಅವಕಾಶ ನೀಡುವ ನಿರೀಕ್ಷೆ ಇದೆ. ಇನ್ನೂ ಹಿಂದುಳಿದ ವರ್ಗ ಹಾಗೂ ಹಿರಿತನದ ಆಧಾರದ ಮೇಲೆ ನನಗೆ ಮಂತ್ರಿಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.