ಕೂಗು ನಿಮ್ಮದು ಧ್ವನಿ ನಮ್ಮದು

ಗ್ರಾಮೀಣ ಕ್ಷೇತ್ರದ ಜನರದ್ದು ವಯಕ್ತಿಕ ಸ್ವಾರ್ಥವಿಲ್ಲದ, ಸಾಮೂಹಿಕ ಒಳಿತಿನ ಬೇಡಿಕೆಗಳೇ ಹೆಚ್ಚು: ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಜನರ ನೆಮ್ಮದಿ, ಸುಖ, ಶಾಂತಿ, ಆರೋಗ್ಯಕ್ಕೆ ದೇವಾಲಯಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿಯೇ ಜನರು ನಮ್ಮ ಬಳಿ ಬಂದಾಗ ಅಕ್ಕ ನಮಗೆ ಬೇರೇನೂ ಬೇಡ, ನಮ್ಮೂರಿಗೊಂದು ದೇವಸ್ಥಾನ ಕಟ್ಟಿಕೊಟ್ಟು ಬಿಡಿ, ಇಲ್ಲ ನಮ್ಮೂರಿನ ದೇವಸ್ಥಾನ ಜೀರ್ಣೋದ್ದಾರ ಮಾಡಿಕೊಟ್ಟು ಬಿಡಿ ಎಂದು ಕೇಳುತ್ತಾರೆ. ನಾನು ಕೂಡ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ವಯಕ್ತಿಕ ಸ್ವಾರ್ಥ ರಹಿತ ಬೇಡಿಕೆಯನ್ನು ಮೊದಲ ಆದ್ಯತೆಯ ಮೇಲೆ ಈಡೇರಿಸುತ್ತಿದ್ದೇನೆ. ಗ್ರಾಮೀಣ ಕ್ಷೇತ್ರದ ಜನರು ಹೆಚ್ಚಾಗಿ ಇಂತಹ ಸಾಮೂಹಿಕ ಒಳಿತಿನ ಬೇಡಿಕೆಗಳನ್ನೇ ಹೆಚ್ಚಾಗಿ ಮುಂದಿಡುತ್ತಿದ್ದಾರೆ. ಇದನ್ನು ಕಂಡು ನನಗೆ ನಿಜವಾಗಿ ಖುಷಿಯಾಗುತ್ತದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕ್ಷೇತ್ರದ ಮಾರಿಹಾಳ ಗ್ರಾಮದಲ್ಲಿ ಗುರುವಾರ, ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ದಾನಮ್ಮದೇವಿ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಹನುಮಾನ ದೇವಸ್ಥಾನಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ರಾಮದ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಕ್ಕೆ ಬಂದಿತ್ತು. ಗ್ರಾಮದ ಹಿರಿಯರಿಂದ ಮಾಹಿತಿಯನ್ನು ಕಲೆಹಾಕಿ, ಕೂಡಲೇ ಗ್ರಾಮಸ್ಥರ ಸಭೆಯನ್ನು ಕರೆದು ಈ ಎಲ್ಲ ದೇವಸ್ಥಾನಗಳ ಅಭಿವೃದ್ಧಿಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇನೆ. ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಮನಸಿಗೆ ನೆಮ್ಮದಿ ತಂದಿದೆ ಎಂದರು.

ಚುನಾವಣೆಯ ಪೂರ್ವದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಕೇವಲ ಭರವಸೆಗಳಾಗಿಯೇ ಉಳಿಸಿದೆ, ಎಲ್ಲ ಭರವಸೆಗಳನ್ನು ಈಡೇರಿಸುತ್ತಾ ಬಂದಿದ್ದೇನೆ. ಜನರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಫಲವಾಗುತ್ತಿವೆ ಎಂದು

ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಂಕಲಗಿಯ ಅಡವಿ ಸಿದ್ದೇಶ್ವರ ಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಂಸದೆ ಮಂಗಳಾ ಅಂಗಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಮಾಜಿ
ಸದಸ್ಯ ಮಹಾಂತೇಶ ಕವಟಗಿಮಠ, ಬೆಳಗಾವಿಯ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ನಿರ್ದೇಶಕಿ ರಾಜಯೋಗಿನಿ ಅಂಬಿಕಾ, ಪ್ರನೀತ ಶೆಟ್ಟಿ, ಡಾ.ಗಿರೀಶ್ ಸೋನವಾಲಕರ್, ಎ ಸಿ ಪಿ ನಾರಾಯಣ ಭರಮನಿ, ಬಿ ಎಸ್ ಮ್ಯಾಗೋಟಿ, ಶಂಕರ ಮಾರಿಹಾಳ, ಶಿವಾನಂದ ಹಿತ್ತಲಮನಿ, ತೌಸಿಫ್ ಫಣಿಬಂದ, ಗಿರಿಜಾ ಪಾಟೀಲ, ಈಶ್ವರಪ್ಪ ವಾಲಿಶೆಟ್ಟಿ, ಬಿ. ಓ. ತಿಪ್ಪೆಸ್ವಾಮಿ, ರಾಮಚಂದ್ರ ಚೌಹಾನ್, ರಾಮಚಂದ್ರ ಅಕ್ಕಿಹಾಳ, ಸಿ. ಆರ್. ಪಾಟೀಲ, ಬಾಲಚಂದ್ರ ಜೋಷಿ, ದಾದಾಫೀರ್ ಝಾರೆ, ಬಸಣ್ಣ ಹಿತ್ತಲಮನಿ, ಅಡಿವೆಪ್ಪ ಯಲ್ಕಪ್ಪನವರ, ಬಸಲಿಂಗಯ್ಯ ಪೂಜೇರ, ನಾರಾಯಣ ಸೊಗಲಿ, ಕಲ್ಲಪ್ಪ ಸೀತಿಮನಿ, ಹರ್ಷವರ್ಧನ ಅಗಸರ, ವೀರಭದ್ರಪ್ಪ ಮಾದಮ್ಮನವರ, ಬಸವರಾಜ ಮೊದಗಿ, ತಾಯವ್ವ ಪಾಟೀಲ, ಮಲ್ಲಿಕಾರ್ಜುನ ಯಲ್ಲಪ್ಪನವರ, ಎಲ್ಲ ದೇವಸ್ಥಾನಗಳ ಟ್ರಸ್ಟ್ ಕಮೀಟಿಯವರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ, ಸರ್ವಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

error: Content is protected !!