ಕೂಗು ನಿಮ್ಮದು ಧ್ವನಿ ನಮ್ಮದು

ಚಾಲಕನ ನಿಯಂತ್ರಣ ತಪ್ಪಿ ಕೆನಾಲ್ ಗೆ ಬಿದ್ದ ಕಾರು: ಮೂವರ ದುರ್ಮರಣ

ಯಾದಗಿರಿ: ಕಾರು ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು, ನಾರಾಯಣಪುರ ಎಡದಂಡೆ ಕಾಲುವೆಗೆ ಬಿದ್ದಿದೆ. ಪರಿಣಾಮ, ಒಂದೇ ಕುಟುಂಬದ ಮೂರು ಜನ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಗುಳಬಾಳ ಗ್ರಾಮದ ಬಳಿ ನಡೆದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬನ್ನಟ್ಟಿ ಗ್ರಾಮದ ಪವನ್ ಬಿರಾದಾರ್ (34), ಮೃತಪಟ್ಟಿದ್ದು, ಪವನ್ ತಂದೆ ಶರಣಗೌಡ ಬಿರಾದಾರ್ (61) ತಾಯಿ ಜಾನಕಿ ಬಿರಾದಾರ್ (55) ಕಾರಿನೊಂದಿಗೆ ನೀರು ಪಾಲಾಗಿದ್ದು ಇವರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮೃತ ಪವನ್ ರ ಕುಟುಂಬದ ಮೂರು ವರ್ಷದ ಮಗು ಸೇರಿ ಒಟ್ಟು ಐದು ಜನ ಒಂದೇ ಕಾರ್ ನಲ್ಲಿ ತಮ್ಮ ಜಮೀನನ್ನು ನೋಡಲು ಬಂದಿದ್ದರು.

ಜಮೀನು ನೋಡಿ ವಾಪಸ್ ತೆರಳುತ್ತಿದ್ದ ಸಮಯದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಕಾಲುವೆಗೆ ಬಿದ್ದಿದೆ. ಕಾರು ನೀರಿಗೆ ಬಿದ್ದು ಕೊಚ್ಚಿ‌ ಹೋಗುತ್ತಿದ್ದರು, ಧೃತಿಗೆಡದೆ ಮೃತ ಪವನ್ ಅವರ 28 ವರ್ಷದ ಪತ್ನಿ ಪ್ರೇಮಾ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ. ಆದ್ರೆ ಕಾರಿನಲ್ಲಿದ್ದ ಇನ್ನೂ ಮೂರು ಜನ ನೀರು ಪಾಲಾಗಿದ್ದು ಪ್ರೇಮಾಳ ಪತಿ ಪವನ್ ಮೃತ ದೇಹ ಪತ್ತೆಯಾಗಿದೆ. ನೀರಿನಲ್ಲಿ ಕೊಚ್ಚಿ ಹೋದ ಶರಣಗೌಡ ಹಾಗೂ ಜಾನಕಿ ಇವರಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದೆ. ಸ್ಥಳಕ್ಕೆ ಹುಣಸಗಿ ಪೊಲೀಸರು ಭೇಟಿ ನೀಡಿ ಘಟನೆ ಮಾಹಿತಿ ಪಡೆಯುತ್ತಿದ್ದು, ಪರಿಶೀಲನೆ ನಡೆಸಿದ್ದಾರೆ.

error: Content is protected !!