ಕೂಗು ನಿಮ್ಮದು ಧ್ವನಿ ನಮ್ಮದು

ಕೋವಿಡ್ ಕಾಲದಲ್ಲೂ ಮಲೆಮಾದೇಶ್ವರನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

ಚಾಮರಾಜನಗರ: ಕೋವಿಡ್ ಕಾಲದಲ್ಲೂ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಾದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಬರುತ್ತಿದೆ. ಬರೋಬ್ಬರಿ ೨.೬೨ ಕೋಟಿ ರೂಪಾಯಿ ಮಲೆಮಾದೇಶ್ವರ ದೇವಸ್ಥಾನಕ್ಕೆ ಸಂಗ್ರಹವಾಗಿದೆ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಗುರುವಾರ ಮುಂಜಾನೆ ೭.೩೦ ರಿಂದ ರಾತ್ರಿ ೧೧.೩೦ರ ವರೆಗೂ ನಡೆದಿದೆ.

ಮಲೆಮಾದೇಶ್ವರ ದೇವಸ್ಥಾನವನ್ನು ತೆರೆದಿದ್ದು ಒಟ್ಟು ೫೬ ದಿನ ಆದ್ರೆ ಆ ೫೬ ದಿನಗಳಲ್ಲಿ ಒಟ್ಟು ೨,೬೨,೭೬,೭೧೮ ರೂಪಾಯಿಗಳು ಸಂಗ್ರಹವಾಗಿದೆ. ೧೭೦ ಗ್ರಾಂ ಚಿನ್ನ, ೩.೭ ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಮಾದಪ್ಪನಿಗೆ ನೀಡಿದ್ದಾರೆ. ಯಾವುದೇ ಸೇವೆಗೆ, ರಥೋತ್ಸವಕ್ಕೆ ಅವಕಾಶ ಇಲ್ಲದಾಗಿಯೂ ಭಕ್ತರು ದೇವರ ದರ್ಶನ ಮಾತ್ರ ಪಡೆದು ಕಾಣಿಕೆ ರೂಪದಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಕೋವಿಡ್ ಹಿನ್ನೆಲೆ ವಿವಿಧ ಸೇವೆ ಮತ್ತು ರಥೋತ್ಸವಗಳನ್ನು ರದ್ದುಪಡಿಸಲಾಗಿತ್ತು. ಆದರೂ ಭಾರೀ ಪ್ರಮಾಣದಲ್ಲಿ ಮಾದಪ್ಪನಿಗೆ ಕಾಣಿಕೆ ಸಂಗ್ರಹವಾಗಿದೆ.

error: Content is protected !!