ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಎಂಬಲ್ಲಿ ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟವಾಗಿದೆ. ಮಂಗಳೂರು: ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಇಂದು (ಜನವರಿ 18) ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಎಂಬಲ್ಲಿ ನಡೆದಿದೆ. ಅಲಂಕಾರು ಗ್ರಾಮದ ರಾಜೇಶ್ ಪೂಜಾರಿ(43) ಮೃತ ಕಾರ್ಮಿಕ.
ಉಪ್ಪಿನಂಗಡಿ ಗಾಂಧಿ ಪಾರ್ಕ್ ಬಳಿ ಇರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಟಯರ್ ರಿಸೋಲ್ ಕೆಲಸದ ವೇಳೆ ಏಕಾಏಕಿ ಕಂಪ್ರೆಸರ್ ಸ್ಫೋಟವಾಗಿದೆ. ಟಯರ್ ರಿಸೋಲ್ ಮಾಡುತ್ತಿದ್ದಾಗ ಏಕಾಏಕಿ ಏರ್ ಕಂಪ್ರೆಸರ್ ಸ್ಫೋಟವಾಗಿದೆ. ಇದರಿಂದ ತೀವ್ರವಾಗಿ ಗಾಯೊಂಡಿದ್ದ ರಾಜೇಶ್ ಪೂಜಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.