ಕೂಗು ನಿಮ್ಮದು ಧ್ವನಿ ನಮ್ಮದು

ಪಂತ್ ಕಾರಣದಿಂದ ದ್ರಾವಿಡ್ ಆ ಆಟಗಾರರನ್ನು ಕೈಬಿಟ್ರಾ? ಇಬ್ಬರಲ್ಲಿ ಯಾರು ಬೆಸ್ಟ್ ಎಂದು ನೀವೇ ನೋಡಿ

ವಿಶ್ವಕಪ್ ಗೆ ಭಾರತ ಹದಿನೈದು ಸದಸ್ಯರನ್ನೊಳಗೊಂಡ ತಂಡವನ್ನು ಪ್ರಕಟಿಸಿರುವುದು ಗೊತ್ತೇ ಇದೆ. ಇನ್ನೂ ನಾಲ್ವರು ಆಟಗಾರರನ್ನು ಸ್ಟ್ಯಾಂಡ್-ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಓರ್ವ ಆಟಗಾರನನ್ನು ಕೈಬಿಟ್ಟಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ವಿಶ್ವಕಪ್‌ಗೆ ಭಾರತ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಗೊತ್ತೇ ಇದೆ. ಇನ್ನೂ ನಾಲ್ವರು ಆಟಗಾರರನ್ನು ಸ್ಟ್ಯಾಂಡ್-ಬೈ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಕೆಲ ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರು ಸಹ ತಂಡದ ಆಯ್ಕೆ ಕುರಿತು ಟೀಕಿಸುತ್ತಿದ್ದಾರೆ. ಇದರ ನಡುವೆ ಅರ್ಹತೆ ಇಲ್ಲದಿದ್ದರೂ ಕೆಲವರು ಟಿ20 ವಿಶ್ವಕಪ್ ಗೆ ಆಯ್ಕೆಯಾಗಿದ್ದಾರೆ ಎಂದು ಕ್ರಿಕೆಟ್ ಪ್ರೇಮಿಗಳು ಟೀಕಿಸುತ್ತಿದ್ದಾರೆ.

ಇನ್ನು ಕೆಲವರು ಅರ್ಹತೆ ಇದ್ದವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಟುವಾದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಕಾಮೆಂಟ್‌ಗಳು ವಿಶೇಷವಾಗಿ ಸಂಜು ಸ್ಯಾಮ್ಸನ್ ಆಯ್ಕೆ ಆಗದಿರುವುದಕ್ಕೆ ಕೇಳಿಬರುತ್ತಿರುವುದು ವಿಶೇಷವಾಗಿದೆ. ಉತ್ತಮವಾಗಿ ಆಡುತ್ತಿದ್ದರೂ ಅವರನ್ನು ಪದೇ ಪದೇ ತಂಡದಿಂದ ಹೊರಗಿಡಲಾಗುತ್ತಿದೆ. ಸತತ ವೈಫಲ್ಯಗಳ ನಡುವೆಯೂ ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ನೀಡಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಂಜು ಸ್ಯಾಮ್ಸನ್ ಅಭಿಮಾನಿಗಳು ಪಂತ್ ಆಯ್ಕೆ ಪ್ರಶ್ನಿಸಿ ಬಿಸಿಸಿಐ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ದೂಷಿಸುತ್ತಿದ್ದಾರೆ.

2022ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ 17 ಪಂದ್ಯಗಳಲ್ಲಿ 458 ರನ್ ಗಳಿಸಿದ್ದರು. ಸರಾಸರಿ 28.63 ಆಗಿದ್ದರೆ ಸ್ಟ್ರೈಕ್ ರೇಟ್ 146.79 ಆಗಿದೆ. ಅದೇ ಸಮಯದಲ್ಲಿ, ಪಂತ್ 14 ಪಂದ್ಯಗಳಲ್ಲಿ 340 ರನ್ ಗಳಿಸಿದರು. ಸರಾಸರಿ 30.91 ಆಗಿದ್ದರೆ ಸ್ಟ್ರೈಕ್ ರೇಟ್ 151 ಆಗಿದೆ. 2021ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ 14 ಪಂದ್ಯಗಳಲ್ಲಿ 484 ರನ್ ಗಳಿಸಿದ್ದರು. ಸರಾಸರಿ 40.33 ಆಗಿದ್ದರೆ ಸ್ಟ್ರೈಕ್ ರೇಟ್ 136.72 ಆಗಿದೆ. ಅದೇ ಸಮಯದಲ್ಲಿ, ಪಂತ್ 16 ಪಂದ್ಯಗಳಲ್ಲಿ 419 ರನ್ ಗಳಿಸಿದರು. ಸರಾಸರಿ 34.91 ಆಗಿದ್ದರೆ ಸ್ಟ್ರೈಕ್ ರೇಟ್ 128.52 ಆಗಿದೆ.

2021 ರಿಂದ, ಸ್ಯಾಮ್ಸನ್ ಅಂತರಾಷ್ಟ್ರೀಯ T20 ಗಳಲ್ಲಿ 9 ಪಂದ್ಯಗಳಲ್ಲಿ 213 ರನ್ ಗಳಿಸಿದ್ದಾರೆ ಸರಾಸರಿ 30.42 ಆಗಿದ್ದರೆ ಸ್ಟ್ರೈಕ್ ರೇಟ್ 142.95 ಆಗಿದೆ. ಅದೇ ಸಮಯದಲ್ಲಿ, ಪಂತ್ 2021 ರಿಂದ ಇಲ್ಲಿಯವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದರು ಮತ್ತು 524 ರನ್ ಗಳಿಸಿದ್ದಾರೆ. ಸರಾಸರಿ 27.57 ಆಗಿದ್ದರೆ ಸ್ಟ್ರೈಕ್ ರೇಟ್ 132 ಆಗಿದೆ. ಇದೇ ಕಾರಣಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಜಿ ಕ್ರಿಕೆಟಿಗರು ಈ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಪಂತ್ ಅವರಂತೆ ಸಂಜು ಸಹ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ನಿಭಾಯಿಸುವುದರಿಂದ ಸ್ಯಾಮ್ಸನ್ ಆಯ್ಕೆ ಉತ್ತಮವಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

error: Content is protected !!