ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಯಡಿಯೂರಪ್ಪನವರದ್ದು ಅಭಿವೃದ್ಧಿ ಪರವಾದ ರಾಜಕಾರಣ; ಮುರುಘಾ ಮಠದ ಸ್ವಾಮೀಜಿ

ಬೆಂಗಳೂರು: ತನಗೆ 70 ವರ್ಷವಾಗಿದ್ದರೂ ಪ್ರಧಾನಿ ಮೋದಿ ಅಮಿತ್ ಶಾ ಅವಕಾಶ ನೀಡಿದ್ದಾರೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಾಗ ಹೇಳುತ್ತಿರುತ್ತಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎನ್ನುತ್ತಿದ್ದರು. ಆದರೆ ಮುಂದೆ ಏನು ಎಂಬುದೇ ಈಗ ವಿಚಾರವಾಗಿದೆ
ಯಡಿಯೂರಪ್ಪನವರ ಒಳಗಡೆ ಒಂದಷ್ಟು ಶಕ್ತಿಯಿದೆ. ಅದರಿಂದಲೇ ಅವರು ಎಲ್ಲ ಸಮಸ್ಯೆಗಳಿಂದ ಪಾರಾದರು.

ರಾಜ್ಯಕ್ಕೂ ಕೂಡ ಉತ್ತಮವಾದ ಯೋಜನೆ ಕೊಟ್ಟಿದ್ದಾರೆ. ಸಿಎಂ ಬಿಎಸ್ವೈರದ್ದು ಅಭಿವೃದ್ಧಿ ಪರವಾದ ರಾಜಕಾರಣ. ಈ ವೇಳೆ ಒಂದಷ್ಟು ಸಮಸ್ಯೆ ಉಂಟಾಯಿತು. ಇದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳುತ್ತಾರೆ ಎಂದು ಮುರುಘಾ ಮಠದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ನಾಯಕತ್ವದ ಬಿಕ್ಕಟ್ಟು ಆಗಿದೆ. ಮುಂದಿನ ನಾಯಕರ ಬಗ್ಗೆ ಸ್ಪಷ್ಟತೆ ಕಂಡು ಬರುತ್ತಿಲ್ಲ. ಇದನ್ನು ಎಲ್ಲ ಶಾಸಕರು ನಿರ್ಧಾರ ಮಾಡುತ್ತಾರೆ. ಈಗಿನ ಸಮಸ್ಯೆ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು. ಇದು ಒಂದು ರೀತಿಯ ಬಿಸಿ ತುಪ್ಪವಾಗಿದೆ. ಎಲ್ಲಾ ಜಾತಿಯ ಮಠಾಧೀಶರನ್ನ ಸೇರಿಸಿಕೊಂಡು ಒಂದು ಶಕ್ತಿಯುತವಾದ ಸಂಘಟನೆ ಮಾಡಬೇಕಿದೆ ಅಂತಾ ಮುರುಘಾ ಶ್ರೀಗಳು ಸಭೆಯಲ್ಲಿ ಕರೆ ನೀಡಿದರು.

error: Content is protected !!