ಕೂಗು ನಿಮ್ಮದು ಧ್ವನಿ ನಮ್ಮದು

ಹಿಂಡಲಗಾ ಜೈಲಿನಲ್ಲಿ ಕೈದಿ ಅನುಮಾನಾಸ್ಪದ ಸಾವು: ಜೈಲು ಸಿಬ್ಬಂದಿ ವಿರುದ್ದ ಕುಟುಂಬಸ್ಥರ ಆಕ್ರೋಶ

ಬೆಳಗಾವಿ: ಕೊಲೆ ಆರೋಪದ ಮೇಲೆ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದ ಕೈದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮೃತ ಕೈದಿಯನ್ನು ಗುರುರಾಜ್ ದೊಡ್ಡಮನಿ ಎಂದು ಗುರುತಿಸಲಾಗಿದೆ. ಕೇರಳದ ಕುಖ್ಯಾತ ರೌಡಿ ತಸ್ಲಮ್ ಕೊಲೆ ಪ್ರಕರಣದಲ್ಲಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದ ಗುರುರಾಜ ದೊಡ್ಡಮನಿ ಇದೀಗ ಹಿಂಡಲಗಾ ಜೈಲಿನಲ್ಲಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತ ಕೈದಿ ಗುರುರಾಜ್ ದೇಶಪಾಂಡೆ

ಇನ್ನು ಹಿಂಡಲಗಾ ಜೈಲು ಮೂಲಗಳ ಪ್ರಕಾರ ಹದಿನೈದು ದಿನಗಳ ಹಿಂದೆ ಗುರುರಾಜ್ ದೊಡ್ಡಮನಿ ಮೇಲೆ ಜೈಲಿನಲ್ಲೇ ಹಲ್ಲೆ ನಡೆದಿತ್ತು ಎನ್ನಲಾಗುತ್ತಿದ್ದು, ಹಲ್ಲೆ ಬಳಿಕ ಗುರುರಾಜ್ ಎದೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ಇದಾದ ಬಳಿಕ ಸಹೋದರ ಕಿರಣ್ ಗೆ ಕರೆ ಮಾಡಿ, ತನ್ನ ಮೇಲೆ ನಡೆದ ಹಲ್ಲೆ ಹಾಗೂ ಎದೆನೋವು ವಿಚಾರ ತಿಳಿಸಿದ್ದ ಎನ್ನಲಾಗುತ್ತಿದೆ.

ಕಳೆದ ಹದಿನೈದು ದಿನಗಳಿಂದ ಗುರುರಾಜ ದೊಡ್ಡಮನಿ ಎದೆನೋವಿನಿಂದ ಬಳಲುತ್ತಿದ್ದ ಎನ್ನಲಾಗಿದೆ. ನಿನ್ನೆ ಸಂಜೆಯೂ ಜೈಲಿನ ಸಿಬ್ಬಂದಿ ಬಳಿ ಎದೆನೋವು ಇರುವುದಾಗಿ ಹೇಳಿಕೊಂಡಿದ್ದ. ಇದಾದ ಕೆಲ ಹೊತ್ತಿನಲ್ಲೇ ಗುರುರಾಜ ದೇಶಪಾಂಡೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅಲ್ಲದೇ ಗುರುರಾಜ್ ಸಾವಿನ ಬಳಿಕ ಮರಣೋತ್ತರ ಪರೀಕ್ಷೆಯನ್ನು ಮಾಡಿಲ್ಲ ಎಂದು ಜೈಲು ಅಧಿಕಾರಿಗಳ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿದ್ದು, ಗುರುರಾಜ ದೇಶಪಾಂಡೆ ಸಾವಿಗೆ ಜೈಲಿನ ಸಿಬ್ಬಂದಿಯೇ ಕಾರಣ ಎಂದು ಆತನ ಸಹೋದರ ಕಿರಣ ಆರೋಪಿಸಿದ್ದಾರೆ. ಹೀಗಾಗಿ ಗುರುರಾಜ ಕುಟುಂಬಸ್ಥರು ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

error: Content is protected !!