ಕೂಗು ನಿಮ್ಮದು ಧ್ವನಿ ನಮ್ಮದು

KRS ಸುತ್ತಮುತ್ತಲಿನ ಗಣಿಗಾರಿಕೆ ಕುರಿತು ತನಿಖೆ ಮಾಡಿ:ಅಮಿತ್ ಶಾಗೆ ಸುಮಲತಾ ಮನವಿ

ಮಂಡ್ಯ: KRS ಅಣೆಕಟ್ಟೆಯ ಸುತ್ತಮುತ್ತಲು ನಡೆಯುತ್ತಿರುವ ಗಣಿಗಾರಿಕೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಂಸದೆ ಸುಮಲತಾ ಅಂಬರೀಶ್ರವರು ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ಪತ್ರ ನೀಡುವುದರ ಜೊತೆಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಕಳೆದ ೧ ತಿಂಗಳಿನಿಂದ KRS ವಿಚಾರವಾಗಿ ಸುಮಲತಾ ಅಂಬರೀಶ್ ಅವರು ಮತ್ತು JDS ನಾಯಕರ ನಡುವೆ ವ್ಯಾಪಕ ಚರ್ಚೆಗಳು ನಡೆದಿದ್ದವು. ಇದರ ನಡುವೆ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಎದುರಾಗಿದೆ ಜೊತೆಗೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಮತ್ತು ಇತರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯು ನಡೆಯುತ್ತಿದ್ದು, ಇದರ ಸಲುವಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಗಳು ನಷ್ಟವಾಗುತ್ತಿದೆ.

ಹೀಗಾಗಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಸಂಸದೆ ಸುಮಲತಾ ಹೇಳಿದ್ರು. ಇನ್ನೂ ಇದೇ ವೇಳೆ ಸುಮಲತಾ ಅಂಬರೀಶ್ ಮತ್ತು JDS ನಾಯಕರ ನಡುವ ವಾಕ್ ಸಮರವು ನಡೆದಿತ್ತು. ಹೀಗಾಗಿ ಇದೀಗ ಇದರ ಬೆನ್ನಲ್ಲೇ ಶುಕ್ರವಾರ ಸುಮಲತಾ ಅಂಬರೀಶ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ಪತ್ರವನ್ನು ಕೋಡುವುದರ ಜೊತೆ ಮನವಿಯನ್ನು ಮಾಡಿಕೊಂಡಿದ್ದಾರೆ. ಇನ್ನೂ ಪತ್ರದಲ್ಲಿ KRS ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯು ರಾಜಾರೋಶವಾಗಿ ನಡೆಯುತ್ತಿದೆ. ಹಾಗಾಗಿ KRS ಅಣೆಕಟ್ಟೆಗೆ ಅಪಾಯ ಎದುರಾಗಿದೆ. ಹೀಗಾಗಿ ಮುಂದೆ ಸಂಭವಿಸಬಹುದಾದ ಅಪಾಯ ಕುರಿತು ವಾಸ್ತವಾಂಶವನ್ನು ತರಲಾಗಿದೆ ಜೊತೆಗೆ ಈ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸುವಂತೆ ಸುಮಲತಾ ಅಂಬರೀಶ್ ಅವರು ಮನವಿ ಮಾಡಿದ್ದಾರೆ.

error: Content is protected !!