ಕೂಗು ನಿಮ್ಮದು ಧ್ವನಿ ನಮ್ಮದು

ಗಂಡನ ಮನೆಯಲ್ಲಿಯೇ ನೇಣಿಗೆ ಶರಣಾದ ಕಂದಾಯ ಅಧಿಕಾರಿ

ಬಳ್ಳಾರಿ: ಕಂದಾಯ ಅಧಿಕಾರಿಯೊಬ್ರು ನೇಣಿಗೆ ಶರಣಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ಸದಾಶಿವ ನಗರದಲ್ಲಿ ಸಂಭವಿಸಿದೆ. ಚೈತ್ರಾ (೨೫) ಮೃತ ದುರ್ದೈವಿ. ಕೊಪ್ಪಳ ನಗರ ಸಭೆಯಲ್ಲಿ ಚೈತ್ರಾ ಕಂದಾಯ ಅಧಿಕಾರಿಯಾಗಿ ಕೆಲಸ ಮಾಡುತಿದ್ರು. ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ಗಂಡನ ಜೊತೆಯಲ್ಲಿ ಚೈತ್ರಾ ವಾಸವಾಗಿದ್ರು. ಇದ್ದಕ್ಕಿದಂತೆ ಇವತ್ತು ಮುಂಜಾನೆ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಚೈತ್ರಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕ ಪಕ್ಕದ ಮನೆಯವರು ಹೇಳುವ ಪ್ರಕಾರ ಗಂಡ ಹೆಂಡತಿ ಇಬ್ರು ತುಂಬಾ ಚೆನ್ನಾಗಿಯೇ ಇದ್ರು. ಗಂಡ ಹೆಂಡತಿಯ ನಡುವೆ ಯಾವುದೇ ಜಗಳ ಗಲಾಟೆ ಇರಲಿಲ್ಲಾ. ಆದ್ರೆ ಚೈತ್ರಾ ಸಾವಿಗೆ ಬೇರೆ ಎನು ಕಾರಣ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!