ಹಾವೇರಿ: ಶಿಗ್ಗಾಂವಿಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಶಕ್ತಿ ಪ್ರದರ್ಶನ ನಡೆದಿದೆ. ಚೆನ್ನಮ್ಮ ಸರ್ಕಲ್ನಿಂದ ಸಮಾವೇಶದ ಸ್ಥಳದವರೆಗೂ ರೋಡ್ ಶೋ ನಡೆದಿದೆ. ಈ ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.
ನಟ ಸುದೀಪ್, ಸಿಎಂ ಬೊಮ್ಮಾಯಿ, ಜೆಪಿ ನಡ್ಡಾ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು, ನಟ ಕಿಚ್ಚ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಸಿಳ್ಳೆ ಕೆಕೆ ಹಾಕುತ್ತಿದ್ದಾರೆ. ಇನ್ನು ಮೆರವಣಿಗೆ ತುಂಬೆಲ್ಲ ನಟ ಸುದೀಪ್ ಭಾವಚಿತ್ರವಿರುವ ಬಾವುಟಗಳು ರಾರಾಜಿಸುತ್ತಿವೆ. ನಟ ಸುದೀಪ್ ಅವರನ್ನು ನೋಡಲು ಸುತ್ತ-ಮುತ್ತದ ಹಳ್ಳಿಯ ಯುವಕರು ಮತ್ತು ಯುವತಿಯರು ಆಗಮಿಸಿದ್ದಾರೆ