ಬೆಂಗಳೂರು: ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರಿ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೆಯೋಹಾಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಸುದೀಪ್, ತಮಗೆ ಬಂದಿದ್ದ ಅನಾಮದೇಯ ಪತ್ರದಲ್ಲಿನ ತನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದ ಅಂಶಗಳನ್ನ ಮಾಧ್ಯಮಗಳಲ್ಲಿ ಪ್ರಸಾರ ಮಾಡಕೂಡದು. ಈ ಬಗ್ಗೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿ ಸಂಬಂಧ ವಿಚಾರಣೆ ನಡೆಸಿರುವ ಸೆಷನ್ಸ್ ಕೋರ್ಟ್ ನಿಂದ ಇಂದು ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. ಕಿಚ್ಚ ಸುದೀಪ್ ಗೆ ಗನ್ ಮ್ಯಾನ್ ಕೇಳಲು ಬಂದ ಜಾಕ್ ಮಂಜು ನಟ ಕಿಚ್ಚ ಸುದೀಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಿರ್ಮಾಪಕ ಜಾಕ್ ಮಂಜು ಮನವಿ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು ಮೀಟಿಂಗ್ ನಲ್ಲಿ ಇದ್ದ ಕಾರಣ ವಾಪಸ್ಸಾಗಿದ್ದಾರೆ.
ಇತ್ತೀಚೆಗೆ ಬಂಧಿದ್ದ ಅನಾಮದೇಯ ಪತ್ರದಲ್ಲಿ ಸುದೀಪ್ ಗೆ ಜೀವ ಬೆದರಿಕೆ ಹಿನ್ನೆಲೆ ಸದ್ಯ ಕಿಚ್ಚ ಸುದೀಪ್ ಪರವಾಗಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಮಂಜು ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.