ಬೆಳಗಾವಿ: ಸಂಬಂಧಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿರುವ ಘಟನೆ ಬೆಳಗಾವಿಯ ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಮೇಶ ವಿಠ್ಠಲ್ ಕೋಳಿ(22) ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುರುಳ. ಜಾತ್ರೆಗೆಂದು ತಮ್ಮ ಸಂಬಂಧಿ ಮನೆಗೆ ಬಂದಿದ್ದ 11 ವರ್ಷದ ಬಾಲಕಿ, ನಿನ್ನೆ ರಾತ್ರಿ ಮನೆಯ ಹೊರಗಡೆ ಮಲಗಿದ್ದಾಗ ರಮೇಶ ವಿಠ್ಠಲ್ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ಬಾಲಕಿ ಪೋಷಕರ ಮುಂದೆ ವಿವರಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಖಡಕಲಾಟ ಪೊಲೀಸ್ ಠಾಣೆಯಲ್ಲಿ (ಪೋಸ್ಕೋ ಅಡಿಯಲ್ಲಿ) ಪ್ರಕರಣ ದಾಖಲಿಸಲಾಗಿದೆ. ಇನ್ನು ಪೊಲೀಸರು ಸಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಇದೊಂದು ಫೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಸಂತ್ರಸ್ತೆ ಬಾಲಕಿಯ ಹೆಸರು ಹಾಗೂ ವಿವರ ಬಹಿರಂಗಪಡಿಸುವಂತಿಲ್ಲ. ಹೀಗಾಗಿ ಈ ಸುದ್ದಿಯಲ್ಲಿ ನಾವು ಸಹ ಬಾಲಕಿ ಬಗ್ಗೆ ಯಾವುದೇ ವಿವರವನ್ನು ನೀಡಿಲ್ಲ