ಹೊಟ್ಟೆನೋವು: ಒಂದಲ್ಲ ಒಂದು ಬಾರಿ ಎಲ್ಲರೂ ಹೊಟ್ಟೆನೋವಿನಿಂದ ನೆರಳುತ್ತಾರೆ. ಇಂತಹ ನೋವಿಗೆ ಅನೇಕ ಕಾರಣಗಳಿವೆ. ಅಜೀರ್ಣ ಮತ್ತು ಗ್ಯಾಸ್ ತೊಂದರೆ ಇತ್ಯಾದಿ ಕಾರಣಗಳಿಂದ ಬರುವ ಹೊಟ್ಟೆನೋವು ಜಠರ ಮತ್ತು ಕರುಳಿನ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ. ನೋವು ಉದರದ ಯಾವುದೇ ಭಾಗದಲ್ಲಿ ಇರಬಹುದು ಸಾಮಾನ್ಯವಾಗಿರಬಹುದು ಅಥವಾ ಉಗ್ರವಾಗಿರಬಹುದು.
ಸಾಮಾನ್ಯವಾಗಿ ಈ ತೊಂದರೆ ಕಾಣಿಸಿಕೊಳ್ಳುವುದು ಹೊಕ್ಕಳ ಸುತ್ತ. ಇದು ತೀವ್ರರೂಪದ್ದೇನಲ್ಲ, ಶಾಖ ಕೊಡುವಿಕೆ, ಆಹಾರದಲ್ಲಿ ಬದಲಾವಣೆ ಮುಂತಾದ ಸರಳ ಗೃಹೋಪಚಾರಗಳಿಂದಲೇ ಇದು ಶಮನಗೊಳ್ಳುತ್ತದೆ. ನಲಿಯುವಂತಹ ಉದರದ ನೋವು ಹಲವು ಬಾರಿ ಕರುಳಿನ ಸಂಕೋಚನದಿಂದ ಕಾಣಿಸಿಕೊಳ್ಳುತ್ತದೆ. ಈ ನೋವಿಗೆ ಸಾಧಾರಣ ಕಾರಣಗಳೆಂದರೆ, ಬೇಧಿ ಮತ್ತು ಜಂತು ಹುಳುಗಳ ಕಾಟ. ಮಲಬದ್ಧತೆ ಹಾಗೂ ಭೇದಿ. ಒಮ್ಮೆಲೆ ಬರುವಂತಹ ಕರುಳಿನ ತಡೆಯಂತಹ ಚಿಂತಾಜನಕ ಸ್ಥಿತಿಯಿಂದಲೂ ನೋವು ಬರಬಹುದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯ.
1)ಅರಿಶಿನ ಮತ್ತು ಇಂಗನ್ನು ಗ್ವಾರಪಾಠಾದ ರಸದಲ್ಲಿ ಸೇರಿಸಿ ನಾಭಿಯ ಮೇಲೆ ಲೇಪನ ಮಾಡುವುದರಿಂದ ಹೊಟ್ಟೆನೋವಿನಲ್ಲಿ ಹಿತವಾಗುತ್ತದೆ.
2) ಅರಿಶಿಣ ಮತ್ತು ತುಳಸಿಯ ತಲಾ ಒಂದೊಂದು ಚಮಚ ರಸವನ್ನು ಸೇರಿಸಿ ದಿನದಲ್ಲಿ ಮೂರು ಸಲ ಸೇವಿಸುವುದರಿಂದ ಹೊಟ್ಟೆ ನೋವು ದೂರವಾಗುತ್ತದೆ.
3) ಒಂದು ಲೋಟ ಮಜ್ಜಿಗೆಯಲ್ಲಿ ಒಂದು ಚಮಚ ಅರಿಶಿನ ಚೂರ್ಣವನ್ನು ಸೇರಿಸಿ, ಆಹಾರ ಸೇವಿಸಿದ ನಂತರ ಸೇವಿಸುವುದರಿಂದ, ದೂಷಿತ ವಾಯು ಹೊರಬೀಳುತ್ತದೆ. ಜೀರ್ಣಕ್ರಿಯೆ ಸೂಕ್ತವಾಗಿ ಜರಗುತ್ತದೆ. ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.
4) ಒಂದು ಚಮಚ ಅರಿಶಿನದ ಚೂರ್ಣವನ್ನು ಬಿಸಿ ನೀರಿನೊಡನೆ ನಿತ್ಯ ಮೂರು ಸಲ ಸೇವಿಸುವುದರಿಂದ, ಶ್ವಾಸದ ತೊಂದರೆ, ಅಸ್ತಮ ಮತ್ತು ನೆಗಡಿ ನೆಗಡಿಗಳಲ್ಲಿ ಕಫ ಅಧಿಕ ಪ್ರಮಾಣದಲ್ಲಿ ಬೀಳುತ್ತಿದ್ದರೆ, ಉಪಶಮನ ದೊರೆತು, ಕಫ ನಿವಾರಣೆಯಾಗುತ್ತದೆ.
5) ಅರಿಶಿನ ಮತ್ತು ಜಾಜಿಕಾಯಿಯೊಡನೆ ಸಾಧಾರಣ ಕರ್ಪೂರವನ್ನು ತುಸು ಅರೆದು, ಬೆಚ್ಚನೆಯ ನೀರಿನೊಡನೆ ಸೇವಿಸಿದರೆ, ಹೊಟ್ಟೆನೋವಿನಲ್ಲಿ ಹಿತವಾಗುತ್ತದೆ