ಕೂಗು ನಿಮ್ಮದು ಧ್ವನಿ ನಮ್ಮದು

ಜನರ ಜೀವ ಮತ್ತು ಜೀವನದ ಜೊತೆ ರಾಜ್ಯ ಸರ್ಕಾರದ ಚೆಲ್ಲಾಟ: ಶಾಸಕ ಗಣೇಶ್ ಹುಕ್ಕೇರಿ

ಚಿಕ್ಕೋಡಿ: ಜನರ ಜೀವ ಮತ್ತು ಜೀವನ ಎರಡನ್ನು ಉಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಳ್ಳೆಯ ವೈದಕೀಯ ವ್ಯವಸ್ಥೆ ಮಾಡಿ ಜನರ ಜೀವವನ್ನು ಉಳಿಸುವಲ್ಲಿ ರಾಜ್ಯ ಸರ್ಕಾರ ಈಗಾಗಲೇ ವಿಫಲ ಆಗಿರುವುದು ಒಂದು ಕಡೆ ಆದ್ರೆ, ಇನ್ನೊಂದು ಕಡೆ ಲಾಕಡೌನ್ ದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಜೀವನಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡುವಲ್ಲಿಯೂ ಕೂಡ ಸಂಪೂರ್ಣ ವಿಫಲವಾಗಿದೆ, ಇದನ್ನು ನೋಡಿದ್ರೆ ರಾಜ್ಯ ಸರ್ಕಾರ ಜನರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟ ಆಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಶಾಸಕ ಗಣೇಶ್ ಹುಕ್ಕೇರಿಯವರು ತಿಳಿಸಿದ್ದಾರೆ.

ಲಾಕಡೌನ್ ಮಾಡುವ ಮೊದಲು ಪ್ಯಾಕೇಜ್ ಘೋಷಣೆ ಮಾಡುವಂತೆ ನಮ್ಮ ನಾಯಕರಾದ ಸಿದ್ಧರಾಮಯ್ಯನವರು ಸರ್ಕಾರಕ್ಕೆ ಒತ್ತಾಯ ಮಾಡಿದ್ರು. ಆದ್ರೆ ವಿಪಕ್ಷಗಳ ಮಾತಿಗೆ ತಲೆ ಕೆಡಿಸಿಕೊಳ್ಳದೆ ಲಾಕಡೌನ್ ಜಾರಿಗೆ ತಂದ ಪರಿಣಾಮ ಅನೇಕ ಶ್ರಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಪಕ್ಷನಾಯಕರು ಈ ವಿಚಾರಗಳನ್ನು ಸರ್ಕಾರದ ಮುಂದೆ ಪದೆ ಪದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಪರಿಣಾಮ, ಸನ್ಮಾನ್ಯ ಮುಖ್ಯಮಂತ್ರಿಗಳು 1,250 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದ್ರೆ ಇದು ವಿಪಕ್ಷಗಳ ಒತ್ತಾಯಕ್ಕೆ ಕಾಟಾಚಾರದಿಂದ ಘೋಷಣೆ ಮಾಡಿರುವ ಪ್ಯಾಕೇಜ್ ಹೊರೆತು ಜನರ ಒಳಿತಿಗಾಗಿ ಮಾಡಿರುವ ಪ್ಯಾಕೇಜ್ ಅಲ್ಲ ಎಂದು ಶಾಸಕ ಗಣೇಶ್ ಹುಕ್ಕೇರಿಯವರು ತಿಳಿಸಿದ್ದಾರೆ.

ಘೋಷಣೆ ಮಾಡಿರುವ ಪ್ಯಾಕೇಜ್ ರಾಜ್ಯದ ಕಟ್ಟ ಕಡೆಯ ಶ್ರಮಿಕ ಜೀವಿಗೆ ಯಾವ ರೀತಿ ತಲುಪಿಸ್ತಿವಿ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನ ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿಲ್ಲ. ಕಳೆದ ಬಾರಿಗಿಂತ ಈ ಸಲ ಲಾಕಡೌನ್ ಸಡಿಲ ಇದ್ರು ಕೂಡ, ಕೊರೊನಾ 2 ನೇ ಅಲೆ ಕಳೆದ ಬಾರಿಗಿಂತ ಭೀಕರವಾಗಿ ಇದ್ದ ಪರಿಣಾಮ, ರಾಜ್ಯದ ಹಳ್ಳಿ ಹಳ್ಳಿಗೂ ಫಸರಿಸಿದ್ದು, ಶ್ರಮಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಹಾಗಾಗಿ ಕಳೆದ ಬಾರಿಗಿಂತ ಪ್ಯಾಕೇಜ್ ಗಾತ್ರ ಈ ಬಾರಿ ಜಾಸ್ತಿ ಆಗಬೇಕಿತ್ತು..

ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟರ್ ಗೆ ೧೦, ೦೦೦ ರೂಪಾಯಿ ಕೋಡುತ್ತಿರುವುದು, ರೈತರ ಮುಗಿಗೆ ತುಪ್ಪ ಸವರಿದಂತಿದೆ. ಕಳೆದ ಬಾರಿ ಎಷ್ಟೋ ಚಾಲಕರಿಗೆ ಪರಿಹಾರ ಸಿಕ್ಕಿಲ್ಲ, ಆದ್ರೂ ಕೂಡ ಕಳೆದ ಬಾರಿಯ ನ್ಯೂನತೆಯನ್ನು ಸರಿದೂಗಿಸಲು ಸರ್ಕಾರ ಈ ಬಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳು ಪ್ಯಾಕೇಜ್ ವಿಚಾರವಾಗಿ ಹೊಸ ಆಲೋಚನೆ ಮಾಡುವುದಿರಲಿ ಹಳೆಯ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಪ್ಯಾಕೇಜ್ ಘೋಷಣೆ ಮಾಡಿದ್ರೆ ಎಷ್ಟೋ ಉಪಯುಕ್ತ ಆಗ್ತಿತ್ತು ಎಂದು ಶಾಸಕ ಗಣೇಶ್ ಪ್ರಕಾಶ್ ಹುಕ್ಕೇರಿಯವರು ತಿಳಿಸಿದ್ದಾರೆ.

error: Content is protected !!