ಕೂಗು ನಿಮ್ಮದು ಧ್ವನಿ ನಮ್ಮದು

ಕಿಡ್ನಿ ವೈಫಲ್ಯದ ನಡುವೆಯೂ SSLCಯಲ್ಲಿ ಟಾಪರ್ ಆದ ವಿದ್ಯಾರ್ಥಿನಿ

ಶಿವಮೊಗ್ಗ: ಎಲ್ಲಾ ಸರಿಯಾಗಿದ್ರು ಪರೀಕ್ಷೆ ಎಂಬ ಭಯ ಆವರಿಸಿದ್ರೆ ಉತ್ತಮ ಅಂಕ ಪಡೆಯುವುದೇ ಕಷ್ಟ. ಹೀಗಿರುವಾಗ ಕಿಡ್ನಿ ವೈಫಲ್ಯದ ನಡುವೆಯೂ ವಿದ್ಯಾರ್ಥಿನಿ ಒಬ್ಬಳು S.S.L.C ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.
ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೀನಿಧಿ K.S ಮೂತ್ರಪಿಂಡ ನೋವಿನ ನಡುವೆಯೂ ಈ ಸಲ S.S.L.C ಪರೀಕ್ಷೆಯಲ್ಲಿ ಶೇಕಡಾ ೯೩.೧೨ ರಷ್ಟು ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.

ಆವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುವರಿ ಗ್ರಾಮದ ಶ್ರೀಧರ್ ಮತ್ತು ಶೈಲಜಾ ಎಂಬುವರ ಮಗಳು ಶ್ರೀನಿಧಿಗೆ ಕಳೆದ ೪ ವರ್ಷದ ಹಿಂದೆಯೇ ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡಿದ್ದು, ಒಂದು ವಾರದಲ್ಲಿ ೩ ಬಾರಿ ಡಯಾಲಿಸಿಸ್‍ಗೆ ಒಳಗಾಗಬೇಕಿದೆ. ಹಂತದ್ರಲ್ಲೂ ಸದಾ ಓದಿನಲ್ಲಿ ಮುಂದಿರುವ ಈ ವಿದ್ಯಾರ್ಥಿನಿ ಮೂತ್ರಪಿಂಡ ಸಮಸ್ಯೆಯ ನೋವಿಗೆ ಭಯ ಬೀಳದೇ ತನ್ನ ವ್ಯಾಸಂಗ ಮುಂದುವರಿಸಿದ್ದಾಳೆ.

S.S.L.C ಪರೀಕ್ಷೆಯ ದಿನವು ಕೂಡ ಡಯಾಲಿಸಿಸ್‍ಗೆ ಒಳಗಾಗಿದ್ದ ವಿದ್ಯಾರ್ಥಿನಿ, ಮೂತ್ರಪಿಂಡ ವೈಫಲ್ಯದ ನೋವಿನ ಮದ್ಯವೂ ಪರೀಕ್ಷೆಗೆ ಹಾಜರಾಗಿ ಹೆಚ್ಚಿನ ಅಂಕವನ್ನು ಪಡೆದಿದ್ದಾಳೆ. ಇನ್ನೂ ತೀವ್ರ ಅನಾರೋಗ್ಯದ ನಡುವೆಯೂ ಉತ್ತಮ ಸಾಧನೆ ಮಾಡಿರುವ ಈ ವಿದ್ಯಾರ್ಥಿನಿಯನ್ನು ಶಿಕ್ಷಕರು ಅಭಿನಂದಿಸಿದ್ದಾರೆ

error: Content is protected !!