ಮಡಿಕೇರಿ: ಒಂದೇ ಸಲ S.S.L.C ಪರೀಕ್ಷೆ ಬರೆದು ತಾಯಿ, ಮಗ ಇಬ್ರು ಪಾಸ್ ಆಗಿರುವ ಘಟನೆಯು ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.
ಇನ್ನೂ ಜಿಲ್ಲೆಯ ಪೋನ್ನಂ ಪೇಟೆ ತಾಲೂಕಿನ ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿಯಾಗಿರುವ ಇವರು ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಎಂಬುವವರು ಮತ್ತು ಅವರ ಪುತ್ರ ಗೌತಮ್ ಇಬ್ರು ಒಂದೇ ಸಲ S.S.L.C ಪರೀಕ್ಷೆಯನ್ನು ಬರೆದಿದ್ರು. ಇನ್ನೂ ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಈ ಹಿಂದೆ ಪರೀಕ್ಷೆ ಬರೆದು ಗಣಿತದಲ್ಲಿ ಅನುತ್ತೀರ್ಣರಾಗಿದ್ರು. ಆದ್ರೆ ಈ ಸಲ ತನ್ನ ತಾಯಿ ಯೊಂದಿಗೆ ಪರೀಕ್ಷೆಯನ್ನು ಕೂರುವ ಅವಕಾಶ ಸಿಕ್ತು. ಇನ್ನೂ ಮಡಿಕೇರಿಯಲ್ಲಿ ಕುಸುಮಾರವರು ೬ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ರೆ, ಮಗ ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದು ವಿಶೇಷ.
ಇನ್ನೂ ಕುಸುಮಾವತಿ ೧೮ ವರ್ಷಗಳ ಹಿಂದೆ ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಣ್ಣ ಪ್ರೌಢಶಾಲೆಯಲ್ಲಿ ೬ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರಬೇಕಾದ್ರೆ ವಿವಾಹ ವಾದ್ರು ಹೀಗಾಗಿ ಅವರ ವಿದ್ಯಾಭ್ಯಾಸಕ್ಕೆ ಕಡಿವಾಣ ಬಿತ್ತು. ಜೊತೆಗೆ ಇದೀಗ S.S.L.C ಪರೀಕ್ಷೆಯನ್ನು ಬರೆದು ಪಾಸಾಗಿದ್ದಾರೆ. ಇದರ ಜೊತೆಗೆ ವಿಶೇಷವೆಂನೆದರೆ ತಾಯಿ ಮತ್ತು ಮಗ ಇಬ್ಬರೂ ಒಂದೇ ಸಲ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಕೊಡಗು ಜಿಲ್ಲೆಯಲ್ಲಿ ವಿಭಿನ್ನ ಸಾಧನೆಯಾಗಿದೆ ಎಂದು ಅಲ್ಲಿಯ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ರು.