ಕೂಗು ನಿಮ್ಮದು ಧ್ವನಿ ನಮ್ಮದು

ದಕ್ಷಿಣ ಭಾರತದ ಅತ್ಯಂತ ದೊಡ್ಡ ಸ್ಪಟಿಕಲಿಂಗ ಕಳ್ಳತನ

ಹಾವೇರಿ: ಮಠದ ಬಾಗಿಲು ಮುರಿದು ಸ್ಪಟಿಕಲಿಂಗವೊಂದನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಡದಿದೆ. ಸ್ಪಟಿಕಲಿಂಗವು ಒಟ್ಟು ಹದಿಮೂರು ಇಂಚು ಉದ್ದ ಮತ್ತು ಹದಿಮೂರು ಇಂಚು ಸುತ್ತಳತೆ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂದು ಹೆಸರುವಾಸಿಯಾಗಿತ್ತು. 

ಲಿಂಗವು ನಿನ್ನೆ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಕಳ್ಳತನ ನಡೆದಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!