ಕೂಗು ನಿಮ್ಮದು ಧ್ವನಿ ನಮ್ಮದು

ಸೋಯಾ ಬೀಜ ಕೊರತೆ ಹಿನ್ನೆಲೆ ಅಧಿಕಾರಿಗೆ ಕಟ್ಟಿ ಹಾಕಿ ರೈತರ ಆಕ್ರೋಶ

ಬೀದರ್: ಔರಾದನಲ್ಲಿ ಬಿತ್ತನೆ ಬೀಜಕ್ಕಾಗಿ ಆಗ್ರಹಿಸಿ ಔರಾದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಭೀಮರಾವ್ ಶಿಂಧೆ ಅವರಿಗೆ ಗೇಟಿಗೆ ರೈತರು ಕಟ್ಟಿಹಾಕಿದ್ದಾರೆ. ತಾಲೂಕಿನಲ್ಲಿ ಸೋಯಾ ಬಿತ್ತನೆ ಬೀಜಕ್ಕಾಗಿ ರೈತರ ಪ್ರತಿಭಟನೆ ಕಾವು ದಿನೇ ದಿನೇ ಹೆಚ್ಚಾಗುತ್ತಲಿದ್ದು, ರೈತರು ಔರಾದ್ ರೈತ ಸಂಪರ್ಕ ಅಧಿಕಾರಿ ಭೀಮರಾವ್ ಶಿಂಧೆ ಅವರಿಗೆ ರೈತ ಸಂಪರ್ಕ ಕೇಂದ್ರದ ಗೇಟಿಗೆ ಕೈಗಳನ್ನು ಕಟ್ಟಿ ಹಾಕುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಘಂಟೆ ನೀಡಿದ್ದಾರೆ. ಕಳೆದ ಹತ್ತು ದಿನಗಳಿಂದ ತಾಲೂಕಿನ ರೈತರು ಬಿತ್ತನೆ ಬೀಜಕ್ಕಾಗಿ ಪರಿಪಿಸುತ್ತಿದ್ದರೂ ಯಾರೊಬ್ಬರಿಗೂ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ‌. ಈ ಹಿನ್ನೆಲೆ ನಿನ್ನೆ ಸಾಯಂಕಾಲ ಏಕಲಾರ್ ಗ್ರಾಮದ ರೈತರು ಆರ್‌ಎಸ್‌ಕೆ ಅಧಿಕಾರಿ ಶಿಂಧೆ ಅವರನ್ನು ಸುಮಾರು ಒಂದು ಗಂಟೆಗಳ ಕಾಲ ಆರ್ ಎಸ್‌ಕೆ ಕಟ್ಟಡದ ಗೇಟಿಗೆ ಕಟ್ಟಿ ಹಾಕಿ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಯಾ ಬಿತ್ತನೆ ಬೀಜ ಸರ್ಕಾರದಿಂದ 1ಲಕ್ಷ ಕ್ವಿಂಟಲ ಬರಬೇಕಾಗಿತ್ತು ಆದರೆ 90 ಸಾವಿರ ಕ್ವಿಂಟಲ್ ಬಂದಿದ್ದೆ ಅದರಲ್ಲಿ ಔರಾದ ತಾಲೂಕಿಗೆ 2ಸಾವಿರ ಕ್ವಿಂಟಲ್, ಭಾಲ್ಕಿ 15 ನೂರು ಕ್ವಿಂಟಲ್ ಹಾಗೂ ಬಸವಕಲ್ಯಾಣಕ್ಕೆ 1 ಸಾವಿರ ಕ್ವಿಂಟಲ್ ಕೋರತೆ ಕಂಡು ಬರುತ್ತಿದ್ದೆ. ಇಂದು ನಾಳೆ ಎರಡು ದಿನಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ತಾರಾಮಾಣಿ ಮಾಹಿತಿ ನೀಡಿದ್ದಾರೆ. ಇನ್ನು ಇದೇ ವೇಳೆ ರೈತರು ಮಿಶ್ರ ಕೃಷಿ ಪದ್ದತಿ ಅನುಸರಿಸಬೇಕು. ತೋಟಗಾರಿಕೆ, ಜೇನುಗೂಡು, ಹೈನುಗಾರಿಕೆ, ಇಂತಹ ಹಲವು ಪದ್ದತಿ ರೈತರು ಉಪಯೋಗ ಮಾಡಿ ತಮ್ಮ ಕೃಷಿ ಜೀವನದಲ್ಲಿ ಲಾಭ ಪಡೆಯಬೇಕು ಅಂತ ರೈತರಿಗೆ ಸಲಹೆ ನೀಡಿದರು.

error: Content is protected !!