ಮೈಸೂರು: ಸಿದ್ದರಾಮಯ್ಯನವ್ರ ಧಮ್ ಏನು ಅಂತ ನಮ್ಗೂ ಗೊತ್ತಿದೆ..! ಧಮ್ ಇದ್ರೆ ಅಸೆಂಬ್ಲಿ ಕರೆಯಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವ್ರ ಧಮ್ ಏನು ಅಂತ ಹತ್ತಿರದಿಂದ ನೋಡಿದ್ದೇನೆ. ಯಾವ ರೀತಿ ಧಮ್ ಇದೆ ಅಂತ ಐದು ವರ್ಷ ಅವರ ಜೊತೆಯಲ್ಲಿದ್ದೇ ನೋಡಿದ್ದೇನೆ. ಹೊರಗೆ ಏನು ಮಾತನಾಡ್ತಾರೆ, ಸದನದ ಒಳಗೆ ಏನು ಮಾತನಾಡ್ತಾರೆ ಅಂತ ಎಲ್ಲಾ ಚೆನ್ನಾಗಿ ಗೊತ್ತು ಎಂದು ಸಿದ್ದರಾಮಯ್ಯಗೆ ಸಚಿವ ಸೋಮಶೇಖರ್ ಟಾಂಗ್ ನೀಡಿದ್ದಾರೆ.ಸಿದ್ದರಾಮಯ್ಯನವ್ರ ಆಟ ಏನು ನಡೆಯಲ್ಲ. ಜನಪರ ಕಾಳಜಿ ಇದ್ರೆ ಅಧಿವೇಶನ ಕರೆದಾಗ ವ್ಯಾಲ್ಯೂವೆಬಲ್ ಟೈಂ ಬಿಟ್ಟು ಬಾಯ್ಕೌಟ್ ಮಾಡ್ತಾರೆ.
ಬಾಯ್ಕೌಟ್ ಮಾಡೋಕೆ ಅಸೆಂಬ್ಲಿಯಲ್ಲಿ ಕೂರ್ತಾರಾ.?
ನಮ್ ಧಮ್ ನೀವ್ಯಾಕೆ ಚೆಕ್ ಮಾಡ್ತೀರ ಎಂದಿರುವ ಸೋಮಶೇಖರ್ ಮಾತಿನ ಭರದಲ್ಲಿ ಯಡಿಯೂರಪ್ಪನವ್ರೇ ವಿಲನ್..! ಎನ್ನುವ ಮೂಲಕ ಯಡವಟ್ಟು ಮಾಡಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಾನು ಯಾವಾಗಲೂ ಹಿರೋ.. ವಿಲನ್ ಪಾತ್ರ ಮಾಡಿಯೆರ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಡುವ ಭರದಲ್ಲಿ ಸಚಿವ ಸೋಮಶೇಖರ್, ಯಡಿಯೂರಪ್ಪರನ್ನ ವಿಲನ್ ಮಾಡಿದ್ದಾರೆ. ಅಲ್ಲದೇ, ಸಿದ್ದರಾಮಯ್ಯ, ಕುಮಾರಸ್ವಾಮಿ ನಡುವೆ ಹೀರೋ, ವಿಲನ್ ವಾಕ್ಸಮರ ವಿಚಾರವಾಗಿ ಮಾತನಾಡುತ್ತ ನಮಗೆ ಯಾರೂ ಹೀರೋ ಅಲ್ಲ, ಯಡಿಯೂರಪ್ಪನವ್ರೇ ನಮ್ಗೆ ವಿಲನ್. ಸಿಎಂ ಕೋವಿಡ್ ನಿಯಂತ್ರಿಸಿ ಹೀರೋ ಆಗಿದ್ದಾರೆ. ಹಾಗೆಯೇ ವಿಲನ್ ಕೂಡ ಆಗಿದ್ದಾರೆ. ಯಡಿಯೂರಪ್ಪನವ್ರೇ ಹೀರೋ, ಯಡಿಯೂರಪ್ಪನವ್ರೆ ವಿಲನ್ ಎಂದು ಎರಡೆರಡು ಬಾರಿ ವಿಲನ್ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.