ಕೂಗು ನಿಮ್ಮದು ಧ್ವನಿ ನಮ್ಮದು

ಶೂ ಒಳಗಿಂದ  ಬುಸ್ ಎಂದು ಹೆಡೆ ಬಿಚ್ಚಿ ನಿಂತ ದೈತ್ಯ ಹಾವು

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು,  ದೈತ್ಯ ನಾಗರಹಾವೊಂದು ಬೂಟಿನ ಒಳಗಿಂದ ಎದ್ದು, ಹೆಡೆಬಿಚ್ಚಿದೆ. ಈ ವಿಡಿಯೋ ನೋಡುಗರನ್ನ ಬೆಚ್ಚಿಬೀಳಿಸುವಂತಿದೆ.

ಪತ್ರಕರ್ತ ಭಾರತಿರಾಜನ್ ಎಂಬುವವರು ತಮ್ಮ ಟ್ವಿಟರ್ನಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಮನೆಯ ಬಾಗಿಲಿನ ಹೊರಗಡೆ ಶೂ ಒಂದು ಬಿದ್ದಿದೆ. ಆ ಶೂನಿಂದ ಹೊರಗೆ ಬಂದ ಹಾವು ಹೆಡೆ ಬಿಚ್ಚಿ ನಿಂತಿದೆ. ಬಳಿಕ ಅದನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರಲಾಗಿದೆ.

ಮೈಸೂರಿನಲ್ಲಿರುವ  ಮನೆಯೊಂದರಲ್ಲಿ  ಪತ್ತೆಯಾದ ಈ ಹಾವು, ಈ ಹಾವನ್ನು ಮೋದಲು ನೋಡಿದ ಮನೆ ಮಾಲಿಕರು ಹೌಹಾರಿ ಬಿದ್ದಿದ್ದಾರೆ. ಕೂಡಲೇ ಸ್ನೇಕ್ ಮಾಸ್ಟರ್ಗೆ ಕರೆ ಮಾಡಿ ಹಾವನ್ನು ಹಿಡಿಸಲಾಗಿದೆ‌.

error: Content is protected !!