ಬೆಳಗಾವಿ: ಹಾವು ನೋಡಿದರೆ ಮಾರು ಉದ್ದ ದೂರ ಓಡಿ ಹೋಗುವ ಜನರ ನಡುವೆ, ವ್ಯಕ್ತಿಯೊಬ್ಬ ಜೀವಂತ ಹಾವನ್ನು ಕೊರಳಿಗೆ ಸುತ್ತಿ ಊರೆಲ್ಲಾ ಸುತ್ತಾಟ ನಡೆಸಿರುವ ವಿಚಿತ್ರ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಮನೆಗೆ ಬಂದ ಹಾವನ್ನು ಹಿಡಿದ ರೈತನೊಬ್ಬ ಅದನ್ನು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ, ಊರೆಲ್ಲಾ ಸುತ್ತಾಡಿ ಜಮೀನಿಗೆ ತೆರಳಿದ್ದಾನೆ.
ಬಳಿಕ ಜಮೀನಿನ ಬಳಿ ಇರೋ ಅರಣ್ಯಕ್ಕೆ ಹಾವನ್ನು ಸುರಕ್ಷಿತವಾಗಿ ಬಿಟ್ಟು ವಾಪಾಸ್ಸಾಗಿದ್ದಾರೆ. ಈ ದೃಶ್ಯವನ್ನು ಗ್ರಾಮದ ಯುವಕರು ಸೆರೆಹಿಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ ಈ ರೈತನ ಧೈರ್ಯವನ್ನು ಕೆಲವರು ಮೆಚ್ಚಿ ಅಭಿನಂದನೆ ತಿಳಿಸಿದ್ದಾರೆ.