ಕೂಗು ನಿಮ್ಮದು ಧ್ವನಿ ನಮ್ಮದು

ಎಂಟು ಅಡಿ ಸರ್ಪದಿಂದ ತನ್ನ ಕಂದಮ್ಮನನ್ನು ರಕ್ಷಿಸಿದ ಮಹಾ ತಾಯಿ

ಹಾವು ಸಣ್ಣದಿರಲಿ ದೊಡ್ಡದಿರಲಿ ಮನಸ್ಸಿನಲ್ಲಿ ಭಯ ಆವರಿಸಿ ಬಿಡುತ್ತದೆ. ಅಂಥದ್ದರಲ್ಲಿ ಎಂಟು ಅಡಿ ಉದ್ದದ ನಾಗರ ಹಾವು ಮನೆ ಬಾಗಿಲಿನಲ್ಲಿ ಬಂದು ನಿಂತರೆ ಹೇಗಾಗಬೇಡ. ಹಾವು ಬಂದು ನಿಂತಿದ್ದು ಮಾತ್ರವಲ್ಲ, ಏನೂ ಅರಿಯದ ಕಂದಮ್ಮ ಅದರ ಹೆಡೆ ಮೇಲೆ ಕಾಲು ಬೇರೆ ಇಟ್ಟಿದೆ.

ಹಾವು ಎಂದಾಕ್ಷಣ ಎಂಥವರ ಕೈ ಕಾಲು ಕೂಡಾ ನಡುಗಿ ಹೋಗುತ್ತದೆ. ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಯಾರೂ ಕೂಡಾ ಆ ಜಾಗದಲ್ಲಿ ನಿಲ್ಲುವುದಿಲ್ಲ. ಹಾವು ಸಣ್ಣದಿರಲಿ ದೊಡ್ಡದಿರಲಿ ಮನಸ್ಸಿನಲ್ಲಿ ಭಯ ಆವರಿಸಿ ಬಿಡುತ್ತದೆ. ಅಂಥದ್ದರಲ್ಲಿ 8 ಅಡಿ ಉದ್ದದ ನಾಗರ ಹಾವು ಮನೆ ಬಾಗಿಲಿನಲ್ಲಿ ಬಂದು ನಿಂತರೆ ಹೇಗಾಗಬೇಡ. ಹಾವು ಬಂದು ನಿಂತಿದ್ದು ಮಾತ್ರವಲ್ಲ, ಏನೂ ಅರಿಯದ ಕಂದಮ್ಮ ಅದರ ಹೆಡೆ ಮೇಲೆ ಕಾಲು ಬೇರೆ ಇಟ್ಟಿದೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹಾವಿನ ತಲೆ ಮೇಲೆ ಮಗುವಿನ ಕಾಲು : 
ತಾಯಿ ಮಗು ಮನೆಯ ಒಳಗಿನಿಂದ ಅವರ ಪಾಡಿಗೆ ಹೊರಗೆ ಬರುತ್ತಿದ್ದರು. ಅಲ್ಲಿಯೇ ಹೊರಗೆ ಸುಮಾರು ಎಂಟು ಅಡಿ ಉದ್ದದ ನಾಗರಾಹಾವು ಸರಸರನೆ ಹರಿದು ಬಂದಿದೆ. ಮಗು ಎಂದಿನಂತೆ ತನ್ನ ಪಾಡಿಗೆ ಮನೆಯ ಮೆಟ್ಟಿಲು ಇಳಿದು ಅಲ್ಲಿಯೇ ಆಟ ವಾಡುತ್ತಿದೆ. ಹಾಗೆ ಆಟವಾಡುತ ಇಳಿಯುವಾಗ ಮಗು ನಾಗರಾಜನ ಹೆಡೆಯ ಮೇಲೆ ಕಾಲಿಟ್ಟಿದೆ. ಏಟು ತಿಂದ ನಾಗರಾಜ ಸುಮ್ಮನಿರುತ್ತಾನೆಯೇ? ಒಮ್ಮೆಲೇ ತನ್ನ ಹೆಡೆ ಎತ್ತಿ ಬುಸುಗುಟ್ಟಿದ್ದಾನೆ. 

ದೇವರಂತೆ ಬಂದ ತಾಯಿ  : 
ಹೆಡೆ ಎತ್ತಿದಾಗ ತಾಯಿ ಅಲ್ಲಿರುವ ಹಾವನ್ನು ಗಮನಿಸಿದ್ದಾಳೆ. ಇನ್ನೇನು ಹಾವು ಮಗುವಿಗೆ ಕಚ್ಚಬೇಕು ಎನ್ನುವಷ್ಟರಲ್ಲಿ ತಾಯಿ ಮಗುವನ್ನು ಕಾಪಾಡಿದ್ದಾಳೆ. ತಾಯಿ ದೇವರು ಎಂದು ಹೇಳುತ್ತಾರೆ. ಈ ಮಗುವಿನ ಪಾಲಿಗಂತೂ ತಾಯಿ ನಿಜ ರೂಪದಲ್ಲಿ ದೇವರಂತೆಯೇ ಬಂದು ರಕ್ಷಿಸಿದ್ದಾಳೆ. ತಾಯಿಯ ಸ್ಪಂದನೆಯಲ್ಲಿ ಒಂದು ಸೆಕೆಂಡು ತಡವಾದರೂ ಅನಾಹುತ ಸಂಭವಿಸುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಮಂಡ್ಯ ಜಿಲ್ಲೆಯದ್ದು ಎಂದು ಹೇಳಲಾಗುತ್ತಿದೆ. 

error: Content is protected !!