ಕೂಗು ನಿಮ್ಮದು ಧ್ವನಿ ನಮ್ಮದು

ಹೊಟ್ಟೆಯಲ್ಲಿ ಒಂದು ಕೆಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ಭೂಪ; ಎಕ್ಸ್-ರೇ ವೇಳೆ ಬಯಲಾಯ್ತು ಸತ್ಯ

ತಿರುವನಂತಪುರಂ: ಹೊಟ್ಟೆಯಲ್ಲಿ ಒಂದು ಕೆಜಿ ಚಿನ್ನವನ್ನು ಇಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಆರೋಪಿ 36 ವರ್ಷದ ನೌಫಲ್ ತನ್ನ ಹೊಟ್ಟೆಯಲ್ಲಿ ೪ ಚಿನ್ನದ ಕ್ಯಾಪ್ಸುಲ್‌ಗಳನ್ನು ಸಾಗಿಸುತ್ತಿದ್ದನು. ಆತ ಮಲಪ್ಪುರಂ ಜಿಲ್ಲೆಯ ನಿವಾಸಿಯಾಗಿದ್ದಾನೆ. ವರದಿಗಳ ಪ್ರಕಾರ, ನೌಫಲ್ ಸೆಪ್ಟೆಂಬರ್ ೧೯ ರಂದು ದುಬೈನಿಂದ ಬಂದಿದ್ದ. ಆತ ಚಿನ್ನದ ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಆತನನ್ನು ತಪಾಸಣೆ ಮಾಡಿದ್ದರು.

ತಮಗೆ ಸಿಕ್ಕ ಸುಳಿವಿನ ಮೇರೆಗೆ ಪೊಲೀಸರು ಆತನನ್ನು ವಿಮಾನ ನಿಲ್ದಾಣದಲ್ಲಿ ಕೂಲಂಕುಷವಾಗಿ ಪರಿಶೀಲಿಸಿದರೂ ಎಲ್ಲೂ ಚಿನ್ನ ಪತ್ತೆಯಾಗಿರಲಿಲ್ಲ. ನಂತರ ಅವನನ್ನು ವೈದ್ಯಕೀಯ ಸ್ಕ್ಯಾನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ಹೊಟ್ಟೆಯಲ್ಲಿ ಚಿನ್ನದ ಲೋಹ ಪತ್ತೆಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನ ನಿಲ್ದಾಣದಲ್ಲಿ ಈ ರೀತಿಯ ೫೯ ಚಿನ್ನ ಕಳ್ಳಸಾಗಣೆ ಪ್ರಕರಣಗಳು ಪತ್ತೆಯಾಗಿವೆ.

ನೌಫಲ್ ತಮ್ಮ ಗುದನಾಳದಲ್ಲಿ ೪ ಚಿನ್ನದ ಕ್ಯಾಪ್ಸುಲ್ಗಳನ್ನು ಬಚ್ಚಿಟ್ಟುಕೊಂಡು ದುಬೈನಿಂದ ಬಂದಿದ್ದ. ಈ ಚಿನ್ನದ ತೂಕ 1.063 ಕೆಜಿ ಇತ್ತು. ಪೊಲೀಸರು ಆತನ ದೇಹ ಮತ್ತು ಲಗೇಜನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದರೆ, ಅವರಿಗೆ ಚಿನ್ನ ಪತ್ತೆಯಾಗಲಿಲ್ಲ.

ಬಳಿಕ ಆತನನ್ನು ಕೊಂಡೊಟ್ಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವಿವರವಾದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರ ದೇಹದ ಎಕ್ಸ್-ರೇ ಹೊಟ್ಟೆಯೊಳಗೆ ಚಿನ್ನವನ್ನು ಹೊಂದಿರುವ ನಾಲ್ಕು ಕ್ಯಾಪ್ಸುಲ್ಗಳು ಇರುವುದು ಪತ್ತೆಯಾಯಿತು. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!