ಕೂಗು ನಿಮ್ಮದು ಧ್ವನಿ ನಮ್ಮದು

ನನಗೆ ವಯಸ್ಸಾದ್ರು, ನಾನು ವಯ್ಯಸ್ಸಾದ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರದಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಕೆಲವು ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಗುತ್ತಿದೆ. ಅಹೋರಾತ್ರಿ ಧರಣಿಗೆ ಇಬ್ಬರಿಗೆ ವಿನಾಯ್ತಿ ನೀಡಿದ್ದಾರಂತೆ. ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಆ ಇಬ್ಬರ ಹೆಸರನ್ನು ಮೊಗಸಾಲೆಯಲ್ಲಿ ಹೇಳಿ ಹಾಸ್ಯ ಮಾಡಿದ್ದಾರೆ. ಶುಕ್ರವಾರ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕುಳಿತಿದ್ರು.

ಆಗ ಆ ಸ್ಥಳಕ್ಕೆ ಮಾಜಿ ಸಚಿವ ದೇಶಪಾಂಡೆ ಸಹ ಬಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕ ಕುಳಿತರು. ಆಗ ಸಿದ್ದರಾಮಯ್ಯ ದೇಶಪಾಂಡೆಯವರ ಕಾಲೆಳೆಯಲು ಪ್ರಾರಂಬಿಸಿದ್ರು. ಅಹೋರಾತ್ರಿ ಧರಣಿಗೆ ನಮ್ ಶಾಮನೂರು ಶಿವಶಂಕರಪ್ಪ, ಈ ದೇಶಪಾಂಡೆ ಇಬ್ಬರಿಗೂ ವಿನಾಯ್ತಿ ಕೊಟ್ಟಿದ್ದೇವೆ. ಇಬ್ಬರಿಗೂ ವಯಸ್ಸಾಗಿದೆ ಪಾಪ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ. ಇದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ದೇಶಪಾಂಡೆ. ನಾನೇನು ಮುದುಕ ಅಲ್ಲ, ನನಗೇನು ಮಹಾ ವಯಸ್ಸಾಗಿದೆ.

ನಿನಗಿಂತ ನಾನು ಆರು ತಿಂಗಳು ದೊಡ್ಡವನು. ಹಾಗಾದ್ರೆ ನೀನು ಮುದುಕನಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೇಳಿದ್ರು. ನೋಡಪ್ಪಾ, ನನಗೆ ವಯಸ್ಸಾಗಿದ್ರೂ ನಾನು ಹಾಗೆ ಕಾಣಲ್ಲ. ನೀನು ಮಾಗಿ ಬಿಟ್ಟಿದ್ದೀಯಾ. ಅದಕ್ಕೆ ಹಂಗೆ ಹೇಳ್ದೆ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

error: Content is protected !!