ಕೂಗು ನಿಮ್ಮದು ಧ್ವನಿ ನಮ್ಮದು

ಬ್ಯಾನ್ ಮಾಡೋದಾದ್ರೆ ಮಾಡಿ ಸಿದ್ದರಾಮಯ್ಯ

ನಿಮಗೆ ಎಸ್ ಡಿಪಿಐ,  ಪಿಎಫ್ಐ  ಸಮಾಜದ ಸಾಮರಸ್ಯ ಹಾಳು ಮಾಡ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಅಂತಾದ್ರೆ ಬ್ಯಾನ್ ಮಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.  ಶಿವಮೊಗ್ಗದಲ್ಲಿ ನಡೆದ ಗಲಾಟೆ ಸಂಬಂಧ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿದ್ಧರಾಮಯ್ಯನವರು ಮಗು ಚಿವುಟೋರು ಅವರೇ ತೊಟ್ಟಿಲು ತುಗೋರು ಬಿಜೆಪಿ ನಾಯಕರೇ ಎಸ್ ಡಿಪಿಐ, ಪಿಎಫ್ಐ  ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ.

ಅದಕ್ಕೆ ಸರಿಯಾದ ದಾಖಲೆಗಳು ನಿಮ್ಮ ಹತ್ತಿರ ಇದ್ರೆ ಬ್ಯಾನ್ ಮಾಡಿ ನಿಮ್ಮದೇ ಅಧಿಕಾರ ಇದೆಯಲ್ಲ ಎಂದಿದ್ದಾರೆ ಹಾಗಿದ್ರೆ ನೀವು ಯಾಕೆ ಸುಮ್ಮನಿದ್ದಿರಿ ಇಬ್ಬಗೆಯ ರಾಜಕೀಯ ಮಾಡುತ್ತಿದ್ದೀರಿ ಬಿಜೆಪಿಗೆ ಗೌರವ ಕೊಡುವುದು ನಿಮಗೆ ಗೊತ್ತಿಲ್ಲ ಎಂದು ಸಿದ್ಧರಾಮಯ್ಯನವರು ಕಿಡಿಕಾರಿದರು.

error: Content is protected !!