ಹುಬ್ಬಳ್ಳಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಬೆಳಗ್ಗಿನ ಜಾವದಲ್ಲಿ ಸೋಮವಾರದ ವಿಶೇಷ ಪೂಜೆಯ ಜೊತೆಗೆ ಓಂ ನಮಃ ಶಿವಾಯ ಮಂತ್ರಘೋಷ, ಭಜನೆ, ಘಂಟಾ ವಾದ್ಯ ಮೊಳಗಿದೆ.
ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಸಿದ್ಧಾರೂಢರಿಗೆ ವಿಶೇಷ ಪೂಜೆ ನಡೆಯುವುದು ವಾಡಿಕೆ.
ಇದರ ಜೊತೆಗೆ ಶ್ರೀರಾಮಸೇನೆ ಕರೆಕೊಟ್ಟಿರುವ ಸುಪ್ರಭಾತ ಅಭಿಯಾನಕ್ಕೆ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಬೆಂಬಲ ನೀಡಿತ್ತು. ಹೀಗಾಗಿ ನೂರಾರು ಭಕ್ತರಿಂದ ವಿಶೇಷ ಪೂಜೆ ಜೊತೆಗೆ ಭಜನೆ ನಡೆಯಿತು. ಪ್ರತಿ ವಾರಕ್ಕಿಂತ ಈ ವಾರ ಶ್ರೀರಾಮಸೇನೆ ಸದಸ್ಯರ ಜೊತೆಗೆ ನೂರಾರು ಭಕ್ತರು ಸಿದ್ಧಾರೂಢರ ದರ್ಶನ ಪಡೆದಿದ್ದು ವಿಶೇಷವಾಗಿತ್ತು.