ಕೂಗು ನಿಮ್ಮದು ಧ್ವನಿ ನಮ್ಮದು

ನಿಧಿ ಆಸೆಗಾಗಿ ಐತಿಹಾಸಿಕ ಸಿದ್ದೇಶ್ವರ ದೇಗುಲ ಅಗೆದ ಕಳ್ಳರು!

ಡಂಬಳ: ಗ್ರಾಮದ ಐತಿ ಹಾಸಿಕ ಸಿದ್ದೇಶ್ವರ ದೇಗುಲದಲ್ಲಿ ನಿಧಿ ಆಸೆಗಾಗಿ ಕಳ್ಳರು ಗುಂಡಿ ಅಗೆದು ಶೋಧಿಸಿರುವ ಘಟನೆ ನಡೆದಿದೆ. ಡಂಬಳ ಗ್ರಾಮದ ಕೋಟೆ, 450 ಎಕರೆ ವಿಸ್ತಾರವುಳ್ಳ ವಿಕ್ಟೋರಿಯಾ ಮಹಾರಾಣಿ ಕೆರೆ ಮತ್ತು ಋುಷಿಮುನಿಗಳು ಜಪಗೈದಿರುವ ಐತಿಹಾಸಿಕ ಜಪದ ಬಾವಿ ಪಕ್ಕದಲ್ಲಿ ಸಿದ್ದೇಶ್ವರ ದೇವಾಲಯವಿದೆ. ಇದೊಂದು ಐತಿಹಾಸಿಕ ದೇಗುಲ. ರಾಜಮಹಾರಾಜರು ಆರಾಧಿಸುತ್ತಿದ್ದರು ಎಂಬ ಇತಿಹಾಸ ಇದೆ.

ದೇವಾಲಯದ ಒಳಭಾಗದಲ್ಲಿ ಲಿಂಗ ಹಾಗೂ ಮುಂದಿನ ಆವರಣದಲ್ಲಿ ನಂದಿಯ ಮೂರ್ತಿ ಇವೆ. ನಿಧಿಗಳ್ಳರು ಮೂರ್ತಿಯ ಕೆಳ ಭಾಗ ಮತ್ತು ಮುಂದಿನ ಮಂಟಪದ ಕೆಳಭಾಗವನ್ನು ಅಗೆದು ನಿಧಿ ಹುಡುಕಿದ್ದಾರೆ. ಇದೇ ದೇವಾಲಯದ ಮುಂಭಾಗದಲ್ಲಿ ಕೆಲ ತಿಂಗಳ ಹಿಂದೆ ನಿಧಿ ಆಸೆಗಾಗಿ ದೊಡ್ಡ ಗಾತ್ರದ ಗುಂಡಿ ತೆಗೆದಿದ್ದರು. ಈಗ ಮತ್ತೆ ದೇವಾಲಯದ ಒಳ ಭಾಗದಲ್ಲಿ ಗುಂಡಿ ತೆಗೆದಿದ್ದಾರೆ.
ತಕ್ಷಣ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಯವರು ದೇವಾಲಯವನ್ನು ಮರು ನಿರ್ಮಿಸಬೇಕು. ಸಂರಕ್ಷಣೆ ಮಾಡಬೇಕು. ಮುಂಡರಗಿ ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!