ಕೂಗು ನಿಮ್ಮದು ಧ್ವನಿ ನಮ್ಮದು

ಕಳಚಿತು ಜ್ಞಾನಯೋಗಾಶ್ರಮದ ಕೊಂಡಿ, ಸಕಲ ಸರ್ಕಾರಿ ಗೌರವದೊಂದಿದೆ ನಾಳೆ ಸಂಜೆ ಅಂತ್ಯಕ್ರಿಯೆ

ವಿಜಯಪುರ: ಫಲಿಸಲಿಲ್ಲಾ ಲಕ್ಷಾಂತರ ಭಕ್ತರ ಪ್ರಾರ್ಥನೆ.. ಉಸಿರು ನಿಲ್ಲಿಸಿದ ನಡೆದಾಡುವ ದೇವರು. ಕಣ್ಣಿರಲ್ಲಿ ಭಕ್ತವೃಂದ.

ನಾಳೆ ಸಂಜೆ 5 ಗಂಟೆಗೆ ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 4 ಗಂಟೆ ವರೆಗೆ ಆಶ್ರಮದ ಆವರಣದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸೈನಿಕ ಶಾಲೆ ಆವರಣದಲ್ಲಿ ಸಂಜೆ 4 ಗಂಟೆ ವರಗೆ ದರ್ಶನಕ್ಕೆ ಅನುಕೂಲ ಮಾಡಲಾಗಿದ್ದು, ನಾಳೆ ಸಂಜೆ ಐದು ಗಂಟೆಗೆ ಜ್ನಾನಯೋಗಾಶ್ರಮದಲ್ಲಿ ಶ್ರೀಗಳ ಅಂತ್ಯಕ್ರಿಯೆ ನೆರವೇರಲಿದೆ.

ಇನ್ನು ನಡೆದಾಡುವ ದೇವರು, ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಲಕ್ಷಾಂತರ ಜನ ಹರಿದು ಬರುವ ನಿರೀಕ್ಷೆ ಇದೆ. ಹೀಗಾಗಿ ಅಂತಿಮ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಜಯಪುರ ನಗರದಲ್ಲಿರುವ ಹಾಗೂ ಸುತ್ತಮುತ್ತಲಿನ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸಹಾಯವಾಗಲೆಂದು ಉಚಿತ ಊಟದ ವ್ಯವಸ್ಥೆಯನ್ನು ಪೆಟ್ರೋಲಿಯಂ ಅಸೋಸಿಯೇಷನ್ ವತಿಯಿಂದ ಕೈಗೊಳ್ಳಲಾಗಿದೆ. ವಿಜಯಪುರ ಜಿಲ್ಲಾ ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅರುಣ ಹುಂಡೇಕರ ಹಾಗೂ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಅಸೋಸಿಯೇಷನ್ ಉಪಾಧ್ಯಕ್ಷ ದಾದು ತಿವಾರಿ ಮಾಹಿತಿ ನೀಡಿದ್ದಾರೆ.

error: Content is protected !!