ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ & ಡಿಕೆಶಿಗೆ ಶುಭಕೋರುವ ಪೋಸ್ಟರ್ ಹರಿದ ಕನ್ನಡ ಪರ ಸಂಘಟನೆ!

ಬೆಂಗಳೂರು: ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾಮಾಡಲು ಎಲ್ಲಾ ರೀತಿಯಿಂದಲೂ ಕಂಠೀರವ ಕ್ರೀಡಾಂಗಣವು ಅದ್ದೂರಿ‌ ವೇದಿಕೆ ಸಜ್ಜಾಗಿದೆ. ಇನ್ನು ಪ್ರಮಾಣ ವಚನ ಸ್ವೀಕರಿಸುವುದೊಂದೆ ಬಾಕಿ. ಈ ನಿಟ್ಟಿನಲ್ಲಿ ಸಿಲಿಕಾನ್‌ ಸಿಟಿ ನಗರದ ಸುತ್ತೆಲ್ಲಾ ಸಿದ್ದರಾಮಯ್ಯ & ಡಿಕೆಶಿಗೆ ಕಾಂಗ್ರೆಸ್‌ ನಾಯಕರು ಶುಭಕೋರುವ ಪೋಸ್ಟರ್ ಎಲ್ಲಡೆ ಅಳವಡಿಸಲಾಗಿತ್ತು.

ಆದರೆ ಪೋಷ್ಟರ್‌ ನಲ್ಲಿ ಇಂಗ್ಲಿಷ್ ಬಳಸಿ ಶುಭಕೋರಲಾಗಿತ್ತು. ಈ ಹಿನ್ನಲೆ ಕನ್ನಡ ಪರ ಸಂಘಟನೆಗಳು ಪೋಸ್ಟರ್ ಗಳಿಗೆ ಮಸಿ ಬಳಿದು, ಹರಿದು ಕಿತ್ತೆಸೆದಿದ ಘಟನೆ ನಗರದ ಹಲವೆಡೆ ನಡೆದಿದೆ
ಫ್ರೀಡಂಪಾರ್ಕ್ನಲ್ಲಿ ಹಾಕಿದ್ದ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಪೋಷ್ಟರ್‌ ಸೇರಿದಂತೆ ಹಲವರು ಶುಭ ಕೋರುವ ಇಂಗ್ಲಿಷ್‌ ಪೋಸ್ಟರ್‌ ಕಿತ್ತಿದ್ದಾರೆ. ಕನ್ನಡ ಪರ ಸಂಘಟನೆ ಕಾರ್ಯಕರ್ತರು, ಇಂಗ್ಲಿಷ್ ಪೋಸ್ಟರ್ಗೆ ಮಸಿ ಬಳಿದಿರುವುದು ತಿಳಿದು ಬಂದಿದೆ. ಇನ್ನುಳಿದಂತೆ ನಗರದ ಹಲವೆಡೆ ಪ್ರಮಾಣ ವಚನ ಕಾರ್ಯಕ್ರಮ ಜೋರು ನಡೆಯುತ್ತಿದೆ.

ಇನ್ನು ಕೆಲವೇ ಹೊತ್ತಿನಲ್ಲಿಪ್ರಮಾಣ ವಚನ ಸ್ವೀಕರಿಸಲಿರುವ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಗೆ ಶುಭ ಕೋರಲು ಸಮಾರಂಭಕ್ಕೆ ಹೊರ ರಾಜ್ಯಗಳಿಂದ ಬರುತ್ತಿರುವ ಮುಖ್ಯಮಂತ್ರಿಗಳ ದಂಡೆ ಹರಿದು ಬಂದಿದೆ. ಸದ್ಯ ಇನ್ನು ಈ ಕಾರ್ಯಕ್ರಮಕ್ಕೆ ಕಂಠೀರವಣ ಕ್ರೀಡಾಂಗಣಸಜ್ಜಾಗಿದ್ದು, ಜೊತೆಗೆ ಪೊಲೀಸ್ ಎಲ್ಲೆಡೆ ಸರ್ಪಗಾವಲು ಹಾಕಿದ್ದಾರೆ.

error: Content is protected !!