ಕೂಗು ನಿಮ್ಮದು ಧ್ವನಿ ನಮ್ಮದು

ಯಾರಾಗ್ತಾರೆ ಮುಖ್ಯಮಂತ್ರಿ? 1 ಸಿಎಂ, 3 ಡಿಸಿಎಂ: ಕಾಂಗ್ರೆಸ್ನಲ್ಲಿ ಏನಿದು ಸಿದ್ಧ ಸೂತ್ರ?

ಬೆಂಗಳೂರು: ಜಿದ್ದಾಜಿದ್ದಿನಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಜೋಡೆತ್ತುಗಳ ಎದುರು, ಬಿಜೆಪಿ, ಜೆಡಿಎಸ್ ಮಕಾಡೆ ಮಲಗಿವೆ.. 224 ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯದಲ್ಲಿ ಕಾಂಗ್ರೆಸ್ ಪಾಳೆಯ 135 ಸ್ಥಾನ ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.. ಬಿಜೆಪಿ ಪಡೆ ಬರೀ 66 ಸ್ಥಾನ ಮಾತ್ರಗಳಿಸಿದೆ.. ಜೆಡಿಎಸ್ ಪಕ್ಷ ವಂತೂ 19 ಸ್ಥಾನಕ್ಕೆ ತೃಪ್ತಿಕೊಟ್ಟಕೊಳ್ಳಬೇಕಾಗಿದೆ.. ನಾಲ್ಕು ಸ್ಥಾನಗಳು ಇತರರ ಪಾಲಾಗಿವೆ.

ಅಂದಹಾಗೇ, ಸರ್ಕಾರ ರಚಿಸಲು ಯಾವುದೇ ಪಕ್ಷ 113 ಸ್ಥಾನಗಳನ್ನು ಪಡೆಯಬೇಕು.. ಸದ್ಯ ಕೈ ಪಾಳೆಯ ಮ್ಯಾಜಿಕ್ ನಂಬರ್ ಗಡಿದಾಟಿ 135 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದ್ರೆ, ಇದೀಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.

ಕಾಂಗ್ರೆಸ್ ಸೂತ್ರವೇನು?
*ಐದು ವರ್ಷದ ಆಡಳಿತವನ್ನು ಶೇ.50ರ ಆಧಾರದ (ತಲಾ ಎರಡೂವರೆ ವರ್ಷ) ಹಂಚುವ ಫಾರ್ಮುಲಾ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಇದನ್ನು ಡಿ.ಕೆ.ಶಿವಕುಮಾರ್‌ ಪಾಳೆಯ ಒಪ್ಪುತ್ತಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.


*ಸಿದ್ದರಾಮಯ್ಯ ಮೊದಲು ಸಿಎಂ ಆದ್ರೆ ಎರಡು ವರ್ಷಕ್ಕೆ ಮಾತ್ರ. ನಂತರ ಡಿಕೆ ಶಿವಕುಮಾರ್ ಸಿಎಂ ಆದ್ರೆ ಮೂರು ವರ್ಷಗಳು ಅನ್ನೋ ಲೆಕ್ಕಾಚಾರ ಕಾಂಗ್ರೆಸ್‌ ಬಳಿ ಇದೆ ಎನ್ನಲಾಗುತ್ತಿದೆ.


*ಡಿಕೆ ಶಿವಕುಮಾರ್ಗೆ ಸಿಎಂ ಹುದ್ದೆ ನೀಡಿದರೆ ಅವರ ಜೊತೆಗೆ ಮೂವರು ಡಿಸಿಎಂಗಳುನ್ನು ಮಾಡುವ ಪ್ಲಾನ್ ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.


*ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಟ್ಟಿಕೊಂಡು ಹಿಂದುಳಿದ ವರ್ಗದ ಒಬ್ಬರು, ದಲಿತ ಸಮುದಾಯದ ಒಬ್ಬರು, ಲಿಂಗಾಯತ ಸಮುದಾಯದ ಒಬ್ಬರು ಡಿಸಿಎಂ ಮಾಡುವ ಸಾಧ್ಯತೆ.

ಮುಂಚೂಣಿಯಲ್ಲಿ ಸಿದ್ದರಾಮಯ್ಯ
ಸದ್ಯ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಹೈಕಮಾಂಡ್ ಆದ್ಯತೆ ಎಂದು ಭಾವಿಸಲಾಗಿದೆ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಗೊಂದಲಗಳಿದ್ದವು. ನಂತರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಬಿಜೆಪಿಯ ವಿ ಸೋಮಣ್ಣ ಅವರನ್ನು ಸೋಲಿಸಿದ್ದಾರೆ. ಕುರುಬ ಸಮುದಾಯದ ಪ್ರಬಲ ವ್ಯಕ್ತಿಯಾಗಿರುವ ಸಿದ್ದರಾಮಯ್ಯ, ಹಿಂದೂಳಿದ ಎಲ್ಲಾ ಸಮುದಾಯದ ಅಂದರೆ ಅಹಿಂದ ನಾಯಕ ಎಂದು ಹೆಸರಾಗಿದ್ದಾರೆ. ಇನ್ನು 75ರ ಹರೆಯದ ಸಿದ್ದರಾಮಯ್ಯನವರು ಇದು ತಮ್ಮ ಕೊನೆಯ ಚುನಾವಣಾ ಕದನ ಎಂದು ಘೋಷಿಸಿದ್ದಾರೆ. ಹೀಗಾಗಿ ಇವರಿಗೆ ಸಿಎಂ ಹುದ್ದೆ ನೀಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವುದು ಹೈಕಮಾಂಡ್ನ ಲೆಕ್ಕಾಚಾರವಾಗಿದೆ.

error: Content is protected !!