ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ಇಲ್ಲದಿದ್ರೂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಕನವರಿಕೆ ನಿಂತಿಲ್ಲ: ಬಿಜೆಪಿ

ಬೆಂಗಳೂರು: ಕರ್ನಾಟಕ ರಾಜಕೀಯ ಹವಾಮಾನದ ಪ್ರಕಾರ ಕಾಂಗ್ರೆಸ್ ಪಕ್ಷ ಗೆಲ್ಲುವ ಯಾವ ಮುನ್ಸೂಚನೆ ಇಲ್ಲದಿದ್ದರೂ ಸಿದ್ದರಾಮಯ್ಯನವರಿಗೆ ಸಿಎಂ ಕನವರಿಕೆ ಮಾತ್ರ ನಿಂತಿಲ್ಲ’ವೆಂದು ಬಿಜೆಪಿ ಟೀಕಿಸಿದೆ.

ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್ ಅವರ ಮನದಾಳದ ದುಗುಡ. ಹೇಳದೆಯೂ ಎಲ್ಲವನ್ನೂ ಹೇಳಿದ ಇವರ ಮಾತುಗಳು, ಕಾಂಗ್ರೆಸ್ ಪಕ್ಷದಲ್ಲಿ ದಲಿತರ ಸ್ಥಿತಿಯನ್ನು ಚೆನ್ನಾಗಿ ವಿವರಿಸುತ್ತಿವೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಸಿದ್ದರಾಮಯ್ಯ ಸೋಲುವ ಭಯದಲ್ಲಿದ್ದಾರೆಂದು ನಾವು ಮಾತ್ರ ಹೇಳುತ್ತಿಲ್ಲ, ಸ್ವತಃ ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ತಮಗೆ‌ & ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯರಂತೆ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಅಗತ್ಯವಿಲ್ಲವೆಂದು ಡಾ.ಜಿ.ಪರಮೇಶ್ವರ್ ಹೇಳುವ ಮೂಲಕ ಸಿದ್ದರಾಮಯ್ಯ ಬಣಕ್ಕೆ ಬಹಿರಂಗ ಗುದ್ದು ನೀಡಿದ್ದಾರೆ’ ಎಂದು ಟೀಕಿಸಿದೆ.
ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು ‘FAKE’ ಆಗಿರುತ್ತದೆ’ ಎಂದು ಕಾಂಗ್ರೆಸ್‍ಗೆ ಬಿಜೆಪಿ ತಿರುಗೇಟು ನೀಡಿದೆ

error: Content is protected !!