ಕೂಗು ನಿಮ್ಮದು ಧ್ವನಿ ನಮ್ಮದು

ನಾನು ಪಕ್ಷದ ಯಾವುದೇ ವಿಚಾರಕ್ಕೆ ರಿಯಾಕ್ಷನ್ ಮಾಡಲ್ಲ!ಸದ್ಯ ಹೈಕಮಾಂಡ್ ಭೇಟಿ ಮಾಡಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮೂರನೇ ಅಲೆ ಮಕ್ಕಳಿಗೆ ಬರಬಹುದು. ತಜ್ಞರು ಸಹ ಇದನ್ನ ಹೇಳಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳು ಇದೆ. ಈ ಮೂರು ಸಮಯ ಇದೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಬೆಡ್ ಆಕ್ಸಿಜನ್ ಎಲ್ಲವೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, 12 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಕೊಡಬಹುದು. ಗರ್ಭಿಣಿ ಸ್ತ್ರೀಯರಿಗೂ ಸಹ ಲಸಿಕೆ ಹಾಕಬಹುದು. ಆದರೆ, ಗರ್ಭಿಣಿಯರಿಗೆ ಕೊಡುತ್ತಿಲ್ಲ, ಹೀಗಾಗಿ ಮಕ್ಕಳ ಮೇಲೆ ಮೂರನೇ ಅಲೆ ಬರಬಹುದು. ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕೊರೊನಾ ಸಂತ್ರಸ್ತರ ಮನೆಗೆ ಕಾಂಗ್ರೆಸ್ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಹೈಕಮಾಂಡ್ನಿಂದ ಆದೇಶ ಬಂದಿದೆ. ಕೊರೊನಾ ಸಂತ್ರಸ್ತರ ಮನೆಗೆ ಭೇಟಿ ನೀಡಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ನೀಡಿ ಅವರ ದುಃಖದಲ್ಲಿ ಭಾಗಿಯಾಗಿ, ದಿನಸಿ ಸಾಮಗ್ರಿಗಳನ್ನು ನೀಡಲು ಹೇಳಿದ್ದಾರೆ. ಜುಲೈ ೧ರಿಂದ ಪ್ರತಿಯೊಬ್ಬ ಸಂತ್ರಸ್ತರ ಮನೆಗೆ ಭೇಟಿ ನೀಡುತ್ತೇವೆ ಎಂದಿದ್ದಾರೆ. ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪದಾಧಿಕಾರಿಗಳ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ, ಅದು ಪಕ್ಷದ ಆಂತರಿಕ ವಿಚಾರ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಯಾರ ಮದ್ಯೆ ಕೂಡ ಜಗಳಗಳಿಲ್ಲ, ಕೆಲವು ನಾಯಕರು ಹೈಕಮಾಂಡ್ ಭೇಟಿ, ಅವರು ಭೇಟಿ ಮಾಡಿದ್ದು ನನಗೆ ಗೊತ್ತಿಲ್ಲ, ಯಾವ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ, ನಾನು ಪಕ್ಷದ ಯಾವುದೇ ವಿಚಾರಕ್ಕೆ ರಿಯಾಕ್ಷನ್ ಮಾಡಲ್ಲ, ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್ ಸಮನ್ವಯ ಸಮಿತಿ ಮಾಡಲ್ಲ ಅದರ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ, ಸದ್ಯ ಹೈಕಮಾಂಡ್ ಭೇಟಿ ಮಾಡಲ್ಲ ಎಂದು ಸಿದ್ಧರಾಮಯ್ಯ ಅವರು ದೆಹಲಿಗೆ ಹೋಗದ ಬಗ್ಗೆ ಪಡಿಸಿದ್ದಾರೆ.

error: Content is protected !!