ಕೂಗು ನಿಮ್ಮದು ಧ್ವನಿ ನಮ್ಮದು

ದೆಹಲಿಯಲ್ಲಿ ಸಿದ್ದರಾಮಯ್ಯ ಸಮ್ಮುಖ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾದ ಶಾಸಕ ಬೈರತಿ ಸುರೇಶ್

ನವದೆಹಲಿ: ಸದಾ ಸಿದ್ದರಾಮಯ್ಯ ಹಿಂದೆ ಸುತ್ತುತ್ತಾ ಮೈಲೇಜ್ ಗಿಟ್ಟಿಸಲು ಪ್ರಯತ್ನಿಸುವ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಮಾಧ್ಯಮದವರನ್ನು ಹಗುರವಾಗಿ ಪರಿಗಣಿಸಿದಂತಿದೆ.

ದೆಹಲಿಯಲ್ಲಿಂದು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡುತ್ತಿದ್ದಾಗ ಈವಯ್ಯಗೆ ಅದ್ಯಾಕೆ ಬೆಂಕಿಹೊತ್ತಿಕೊಂಡಿತೋ? ಪತ್ರಕರ್ತರು ಸಿದ್ದರಾಮಯ್ಯನವರಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಈ ಆಸಾಮಿ ಕೊತಕೊತ ಕುದಿಯಲಾರಂಭಿಸಿ ಹಲ್ಲೆಗೆ ಮುಂದಾಗುತ್ತಾರೆ. ರೊಚ್ಚಿಗೆದ್ದ ಮಾಧ್ಯಮ ಪ್ರತಿನಿಧಿಗಳು ತಿರುಗಿಬಿದ್ದಾಗ ಸಿದ್ದರಾಮಯ್ಯನವರು ಸಮಾಧಾನಪಡಿಸುತ್ತಾರೆ. ಸುರೇಶ್ ಏನೋ ಹೇಳಲು ಪ್ರಯತ್ನಿಸಿದಾಗ ವಿರೋಧ ಪಕ್ಷದ ನಾಯಕ ಸುಮ್ನಿರಯ್ಯ ಅಂತ ಗದರುತ್ತಾರೆ.

error: Content is protected !!