ಚಿತ್ರದುರ್ಗ: ಭಾರತ್ ಜೋಡೊ ಯಾತ್ರೆಯ ಕರ್ನಾಟಕ ಲೆಗ್ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ ಮತ್ತು ಗುರುವಾರ ಕಾಂಗ್ರೆಸ್ ನಾಯಕರ ಪಾದಯಾತ್ರೆ ಚಿತ್ರುದರ್ಗದಲ್ಲಿ ನಡೆದಿದೆ. ನಿಮಗೆ ಗೊತ್ತಿದೆ, ಬುಧವಾರದ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳೆಯಲ್ಲಿ ನೆಂದಿದ್ದರು.
ಹಾಗಂತ ಇವತ್ತು ಅವರೇನೂ ವಿಶ್ರಾಂತಿ ಬಯಸಲಿಲ್ಲ. ಬದಲಿಗೆ ಗುರುವಾರ ಬೆಳಗ್ಗೆ ತಮ್ಮ ಎಂದಿನ ಹುರುಪಿನಲ್ಲಿ ಕಾರ್ಯಕರ್ತರೊಡನೆ ಪಾದಯಾತ್ರೆಗೆ ತಯಾರಾಗಿಬಿಟ್ಟರು. ವಾದ್ಯಗಳ ಸದ್ದಿಗೆ ಅವರು ಮೈಕುಣಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಅಭಿಮಾನಿಗಳೊಂದಿಗೆ ಸೆಲ್ಫೀಗೆ ಪೋಸ್ ನೀಡಿದರು.