ರಾಯಚೂರು: ಜಿಲ್ಲಾ ಪ್ರವಾಸದಲ್ಲಿರುವ ಸಾರಿಗೆ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ಸಿಂಧನೂರಿನಲ್ಲಿ ಮುಂಜಾನೆ ವಾಯುವಿಹಾರದ ವೇಳೆ ರಸ್ತೆಯಲ್ಲಿ ಸಾರಿಗೆ ಇಲಾಖೆ ಚಾಲಕ, ನಿರ್ವಾಹಕರ ಸಮಸ್ಯೆ ಆಲಿಸಿದ್ರು. ಈ ಕುರಿತಂತೆ ಚಾಲಕ ಮತ್ತು ನಿರ್ವಾಹಕರೊಂದಿಗೆ ಮಾತನಾಡಿದ್ದು ಖುಷಿಯಾಗಿದೆ ಅಂತ ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಶ್ರೀರಾಮುಲು ಹಂಚಿಕೊಂಡಿದ್ದಾರೆ.
ಶ್ರೀರಾಮುಲು ಪೋಸ್ಟ್ಗೆ ಸಾರ್ವಜನಿಕರು ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಫೇಸ್ ಬುಕ್‍ನಲ್ಲೂ ಸಮಸ್ಯೆಗಳನ್ನು ತೋಡಿಕೊಂಡಿರುವ ಸಾರಿಗೆ ಇಲಾಖೆ ಸಿಬ್ಬಂದಿ ಶ್ರೀರಾಮುಲು ಎಲ್ಲರ ಗಮನ ಸೆಳೆದಿದ್ದಾರೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿಗಳ ಉದ್ಘಾಟನೆಗೆ ಆಗಮಿಸಿರುವ ಶ್ರೀರಾಮುಲು ಸಿಂಧನೂರು ಪಟ್ಟಣದಲ್ಲಿ ವಿದ್ಯಾರ್ಥಿನಿಯರ ಮೆಟ್ರಿಕ್ ನಂತರದ ವಸತಿ ನಿಲಯ ಉದ್ಘಾಟನೆ ಮಾಡಿದ್ರು.
ವಸತಿ ನಿಲಯ ಉದ್ಘಾಟನೆ ನಂತರ ವಿದ್ಯಾರ್ಥಿನಿಯರ ಜೊತೆಗೆ ಶ್ರೀರಾಮುಲು ಸಂವಾದ ನಡೆಸಿದ್ರು. ಬಸ್, ಕುಡಿಯುವ ನೀರು, ರಸ್ತೆ ಸಮಸ್ಯೆ ಸರಿಪಡಿಸಲು ವಿದ್ಯಾರ್ಥಿನಿಯರು ಶ್ರೀರಾಮುಲು ಅವರಿಗೆ ಮನವಿ ಮಾಡಿದ್ರು. ಸಂವಾದದ ನಂತರ ವಿದ್ಯಾರ್ಥಿನಿಯರ ಜೊತೆಗೆ ಶ್ರೀರಾಮುಲು ಸೆಲ್ಫಿ ತೆಗೆದುಕೊಂಡ್ರು.