ಕೂಗು ನಿಮ್ಮದು ಧ್ವನಿ ನಮ್ಮದು

ಐಟಿ ದಾಳಿಗೂ, ರಾಜಕೀಯಕ್ಕೂ ಸಂಬಂಧ ಇಲ್ಲ: ಕೋಟಾ ಶ್ರೀನಿವಾಸ ಪೂಜಾರಿ

ಹಾವೇರಿ: ಐಟಿ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ದಾಳಿ ಆದಾಯಕ್ಕೆ ಮೀರಿ ಸಂಪಾದನೆ ಮಾಡಿದವರ ಬಗ್ಗೆ ವೀಕ್ಷಣೆ ಮಾಡುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಶ್ರೀನಿವಾಸ ಪೂಜಾರಿ, ಯಡಿಯೂರಪ್ಪನವರು ನಮ್ಮ ಸರ್ವೋಚ್ಚ ನಾಯಕ ಐಟಿ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ದಾಳಿ ಆದಾಯಕ್ಕೆ ಮೀರಿ ಸಂಪಾದನೆ ಮಾಡಿದವರ ಬಗ್ಗೆ ವೀಕ್ಷಣೆ ಮಾಡುತ್ತದೆ.

ಹಾಗಾಗಿ ರಾಜಕೀಯಕ್ಕೂ, ಐಟಿ ದಾಳಿಗೂ ಸಂಬಂಧ ಇಲ್ಲ ಎಂದ್ರು. ಇದೇ ವೇಳೆ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ನಡೆಯುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ತಲುಪಿಸುತ್ತೇವೆ. ೨ ಕ್ಷೇತ್ರದ ಉಪಚುನಾವಣೆಯಲ್ಲಿ BJP ಅಭ್ಯರ್ಥಿ ಗೆಲುವು ಪಡೆಯುತ್ತಾರೆ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ರು.

ಯಾರನ್ನು ನಿರಾಕರಿಸಿಲ್ಲ ಅವರವರ ಹಕ್ಕುಗಳನ್ನು ಕೇಳುವುದು ಸಹಜ. ಪಕ್ಷ ಎಲ್ಲವನ್ನೂ ತೀರ್ಮಾನ ಮಾಡಿ ಟಿಕೆಟ್ ಘೋಷಣೆ ಮಾಡಿದೆ. ಈಗ ಶಿವರಾಜ್ ಸಜ್ಜನರ್ ಒಮ್ಮತ್ತದ ಅಭ್ಯರ್ಥಿ ಆಗಿದ್ದಾರೆ. ಶಿವರಾಜ್ ಸಜ್ಜನರ್ ಗೆಲುವು ನಿಶ್ಚಿತವಾಗಿದೆ ಎಂದು ನುಡಿದಿದ್ದಾರೆ.

error: Content is protected !!