ಕೂಗು ನಿಮ್ಮದು ಧ್ವನಿ ನಮ್ಮದು

ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದು ನಿಜ ಆದ್ರೆ ಬೇರೆಯವರ ಬಗ್ಗೆ ಅಪಪ್ರಚಾರ ಮಾಡಿಲ್ಲ: ನಟ ಶಿವರಾಜಕುಮಾರ್

ಶಿವಮೊಗ್ಗ: ಚಿತ್ರನಟ ಶಿವರಾಜ್ ಕುಮಾರ್ ನಿನ್ನೆ ವರುಣಾದಲ್ಲಿ ಸಿದ್ದರಾಮಯ್ಯನವರ ಪರ ಪ್ರಚಾರ ಮಾಡಿದ್ದು ವಿ ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ಅವರಿಗೆ ಇರುಸು ಮುರುಸು ಉಂಟು ಮಾಡಿದೆ. ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ತಾನು ರೂ. 60 ಕೋಟಿ ಆಸ್ಪತ್ರೆ ಕಟ್ಟಿಸಿದ್ದರೂ ಶಿವರಾಜ್ ಕುಮಾರ್ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಸೋಮಣ್ಣ ಬಹಿರಂಗವಾಗೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಶಿವರಾಜಕುಮಾರ್ ಕೆಲವು ಸ್ಪಷ್ಟೀಕರಣಗಳನ್ನು ನೀಡಿದರು. ಸೋಮಣ್ಣ ಮತ್ತು ಪ್ರತಾಪ್ ಇಬ್ಬರೂ ತನಗೆ ಆತ್ಮೀಯರೆಂದು ಹೇಳಿದ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲೂ ತನಗೆ ಬೇಕಾದವರಿದ್ದಾರೆ ಎಂದರು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧಿಸುತ್ತಿರುವ ವಿಚಾರ ತನಗೆ ಗೊತ್ತಿರಲಿಲ್ಲ ಎಂದು ಅವರು. ತಾನು ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದು ನಿಜ ಆದರೆ ಬೇರೆಯವರ ಬಗ್ಗೆ ಅಪಪ್ರಚಾರ ಮಾಡಿಲ್ಲ ಎಂದು ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದರು.

error: Content is protected !!