ಕೂಗು ನಿಮ್ಮದು ಧ್ವನಿ ನಮ್ಮದು

ಮತಯಾಚನೆಗೆ ಮೊದಲು ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಮಗನೊಂದಿಗೆ ಶಬರಿಮಲೆಗೆ ಹೊರಟ ಕೆಎಂ ಶಿವಲಿಂಗೇಗೌಡ

ಹಾಸನ: ಜೆಡಿಎಸ್ ಪಕ್ಷಕ್ಕೆ ಇತ್ತೀಚಿಗೆ ಕೊಕ್ ನೀಡಿ ಕಾಂಗ್ರೆಸ್ ಪಕ್ಷ ಸೇರಿರುವ ಶಾಸಕ ಕೆಎಂ ಶಿವಲಿಂಗೇಗೌಡರು ತಮ್ಮ ಗೆಲುವಿಗಾಗಿ ಕ್ಷೇತ್ರದಲ್ಲಿ ಕಸರತ್ತು ನಡೆಸಿರುವಂತೆಯೇ ದೇವರ ಮೊರೆ ಕೂಡ ಹೋಗಿದ್ದಾರೆ. ತಮ್ಮ ಪುತ್ರ ಆದರ್ಶ ಗೌಡ ಜೊತೆ ಅವರು ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ತೆರಳಿದ್ದಾರೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶಿವಲಿಂಗೇಗೌಡರು ಅರಸೀಕೆರೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿದರು. ಹಾಗೆ ನೋಡಿದರೆ, ಅರಸೀಕೆರೆಯಲ್ಲಿ ಶಿವಲಿಂಗೇಗೌಡರು ಜನಪ್ರಿಯ ನಾಯಕರು ಅನ್ನೋದು ನಿರ್ವಿವಾದಿತ. ಜನಗಳು ಹೇಳುವ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಗೌಡರು ಗೆಲುವು ಸಾಧಿಸುತ್ತಾರೆ.

error: Content is protected !!