ಧಾರವಾಡ: ಇಲ್ಲಿಯ ಬಿಜೆಪಿ ಪಕ್ಷದ ವತಿಯಿಂದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯ ನಿಮಿತ್ತವಾಗಿ ನಡೆದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ ಸೇವೆಯ ಬದ್ಧತೆ ಇಂದು ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು. ಇನ್ನು ಇದೇ ಧೀಮಂತ ನಾಯಕನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಸ್ಮರಣಾರ್ಥ ಸಸಿ ನೆಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ಮಂಡಲ ಅಧ್ಯಕ್ಷರಾದ ಬಸವರಾಜ ಗರಗ್ , ಮಹಿಳಾ ಮೋರ್ಚಾದ ಅಧ್ಯಕ್ಷೆ ಮಾಲತಿ ಹುಲಿಕಟ್ಟಿ, ಕಾರ್ಯದರ್ಶಿಗಳು, ಇತರೆ ಸದಸ್ಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.