ಕೂಗು ನಿಮ್ಮದು ಧ್ವನಿ ನಮ್ಮದು

ಮಹಾಮಾರಿ ಕೊರೋನಾ ಅಬ್ಬರ: ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಾ ಸೆಮಿ ಲಾಕ್ಡೌನ.? ಇಂದೇ ನಿರ್ಧಾರ.!

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಅಬ್ಬರ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಸೆಮಿ ಲಾಕ್ ಡೌನ್ ಹೇರಿಕೆಯ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಮಹಾಮಾರಿ ನಿಯಂತ್ರಣಕ್ಕೆ ಮುಂಜಾಗೃತಾ ಕೃಮವಾಗಿ ತಜ್ಞರ ಸಮೀತಿ ಸರ್ಕಾರಕ್ಕೆ ಕೆಲವು ಪ್ರಮುಖ ಅಂಶಗಳನ್ನೊಳಗೊಂಡ ವರದಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ 10 ಗಂಟೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟಫ್ ರೂಲ್ಸ್ ಗಳ ಹೇರಿಕೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನು ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವುದು, ಒಳಾಂಗಣ ಕಾರ್ಯಕ್ರಮ, ಸ್ವಿಮಿಂಗ್ ಪೂಲ್, ಜಿಮ್ ಗಳಿಗೆ ನಿರ್ಬಂಧ ಹೇರಿಕೆ ಮಾಡುವುದು ಸೇರಿದಂತೆ ಹಲವು ಸಲಹೆಗಳನ್ನು ಕೋವಿಡ್ ತಜ್ಞರ ಸಮಿತಿ ನೀಡಿದ್ದು, ಇಂದಿನ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಈಗಾಗಲೇ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕಠಿಣ‌ ನಿರ್ಧಾರವನ್ನು ಕೈಗೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಮುಂದಿನ ಎರಡು ವಾರಗಳ ಕಾಲ‌ ಸೆಮಿ‌ ಲಾಕ್ ಡೌನ್ ಹೇರಿಕೆಯ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಒಂದೊಮ್ಮೆ ಕಠಿಣ ನಿರ್ಧಾರಗಳು ಜಾರಿಯಾದ್ರೆ ಜಾತ್ರೆ,‌‌ ಮದುವೆ, ಸಭೆ,‌ ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ‌. ಅಷ್ಟೇ ಅಲ್ಲಾ ಶಾಲೆ, ಕಾಲೇಜು, ಹಾಸ್ಟೇಲ್ ಗಳಿಗೂ ಬೀಗ ಬೀಳುವ ಸಾಧ್ಯತೆಯಿದೆ.

error: Content is protected !!