ಅಂಗವಿಕಲನಿಗೆ ಸಿಗಬೇಕಿದ್ದ ಸ್ಕೂಟರನ್ನು ಮಗಳಿಗೆ ಗಿಫ್ಟ್ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಂಗವಿಕಲರಿಗೆಂದೇ ನಾಲ್ಕು ಚಕ್ರದ ವಾಹನವಿರುತ್ತೆ.
ನಾಲ್ಕು ಚಕ್ರ ಕಿತ್ತು ಎರಡು ಚಕ್ರದ ಸ್ಕೂಟರ್‌ನ್ನು ಮಗಳಿಗೆ ಗಿಫ್ಟ್ ನೀಡಿರುವುದಾಗಿ ಬಿಜೆಪಿ ಕಾರ್ಯಕರ್ತನ ವಿರುದ್ಧ ಅಂಗವಿಕಲ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಸೋಷಿಯಲ್ ವೆಲ್‌ಫೆರ್ ಇಲಾಖೆಯಿಂದ ಮೋಟಾರ್ ಸೈಕಲ್ ಕೊಡಿಸೋದಾಗಿ ಚಂದ್ರಶೇಖರ್ ಹೆಸರಿನ ಸಹಿಯನ್ನ ನಕಲಿ ಮಾಡಿ ವಂಚನೆ ಮಾಡಿರೋದಾಗಿ ಆರೋಪ ಕೇಳಿ ಬಂದಿದೆ