ಕೂಗು ನಿಮ್ಮದು ಧ್ವನಿ ನಮ್ಮದು

ಸಿರಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ‘ಸತ್ಯ’ ಧಾರಾವಾಹಿ ಹೀರೋ ಸಾಗರ್ ಬಿಳಿಗೌಡ

ಕನ್ನಡ ಕಿರುತೆರೆಯ ಖ್ಯಾತ ನಟ ಸಾಗರ್ ಬಿಳಿಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳತಿ ಸಿರಿ ರಾಜು ಜೊತೆ ಸಾಗರ್ ಬಿಳಿಗೌಡ ಗಣ್ಯರಾಜ್ಯ ದಿನವೇ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಕನ್ನಡ ಕಿರುತೆರೆಯ ಖ್ಯಾತ ನಟ ಸಾಗರ್ ಬಿಳಿಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಹುಕಾಲದ ಗೆಳತಿ ಸಿರಿ ರಾಜು ಜೊತೆ ಸಾಗರ್ ಬಿಳಿಗೌಡ ಗಣ್ಯರಾಜ್ಯ ದಿನವೇ ಸಾಗರ್ ಮತ್ತು ಸಿರಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಸತ್ಯಾ ಧಾರಾವಾಹಿ ಮೂಲಕ ಮನೆಮಾತಾಗಿರುವ ಸಾಗರ್ ಮದುವೆ ಪೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಾಗರ್ ಮತ್ತು ಸಿರಿ ಮದುವೆ ಸಂಭ್ರಮದಲ್ಲಿ ಕಿರುತೆರೆ ಗಣ್ಯರು, ಆಪ್ತರು ಮತ್ತು ಕುಟುಂಬದವರು ಭಾಗಿಯಾಗಿ ನವ ಜೋಡಿಗೆ ಶುಭಕೋರಿದ್ದಾರೆ.

ಸಿರಿ ಮತ್ತು ಸಾಗರ್ ಅವರದ್ದು ಪ್ರೇಮ ವಿವಾಹ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಇತ್ತೀಚಿಗಷ್ಟೆ ಫೋಟೋ ಶೇರ್ ಮಾಡುವ ಮೂಲಕ ಅಧಿಕೃತ ಗೊಳಿಸಿದ್ದರು. ಬಳಿಕ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇಂದು ಹಸೆಮಣೆ ಏರಿದೆ. ಸಾಗರ್ ಮತ್ತು ರಿಸಿ ಜೋಡಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ಶುಭಾಶಯ ಸುರಿಮಳೆ ಬರುತ್ತಿದೆ.

ಸಿರಿ ರಾಜು ಕೂಡ ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ವಿಜಯ್ ರಾಘವೇಂದ್ರ ಜೊತೆಗೆ FIR 6 to 6 ಸಿನಿಮಾದಲ್ಲಿ ಸಿರಿ ರಾಜು ಅಭಿನಯಿಸುತ್ತಿದ್ದಾರೆ. ಇನ್ನು ಕೆಲವು ವೆಬ್ ಸೀರೀಸ್ ಗಳಲ್ಲೂ ನಟಿಸಿದ್ದಾರೆ.

ಸಾಗರ್ ಸದ್ಯ ಸತ್ಯ ಧಾರಾವಾಹಿಯಲ್ಲಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಮೂಲ್ ಬೇಬಿ ಅಂತನೆ ಫೇಮಸ್ ಆಗಿದ್ದಾರೆ. ಸೀರಿಯಲ್ ನಲ್ಲಿ ಮುಗ್ಧ ಹುಡುಗನಾಗಿ, ಅಮ್ಮನ ಮುದ್ದಿನ ಮಗನಾಗಿ ಅಭಿನಯಿಸುತ್ತಿದ್ದಾರೆ. ಜೊತೆಗೆ ತಮ್ಮ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ

error: Content is protected !!