ಬಾಗಲಕೋಟ: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಶಾಸಕರ ಹೇಳಿಕೆಗಳು ಭಾರಿ ಸದ್ದು ಮಾಡುತ್ತಿವೆ,ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಹ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿ ಇರುವ ಅವರು ಸಹ ಮಾಧ್ಯಮದವರ ಪ್ರಶ್ನೆಗೆ ಹೇಳಿಕೆ ನೀಡಿದ್ದು, ಅಂತಿಮವಾಗಿ ಸಿಎಂ ಆಯ್ಕೆ ಮಾಡುವುದು ನಮ್ಮ ಹೈಕಮಾಂಡ್, ನಾವೇ ಏನೇ ಹೇಳಿದರು ಅದು ತಾತ್ಕಾಲಿಕ ಆಗಿರುತ್ತದೆ. ಮೊದಲಿನಿಂದಲೂ ಸಿಎಂ ಸ್ಥಾನಕ್ಕೆ ಯಾವಾಗಲೂ ಇಬ್ಬರು ಮೂವರ ಹೆಸರು ಕೇಳಿ ಬರುತ್ತದೆ ಹೀಗಾಗಿ ಅಂತಿಮವಾಗಿ ಹೈಕಮಾಂಡ್ ಒಬ್ಬರ ಹೆಸರು ಪೈನಲ್ ಮಾಡುತ್ತಾರೆ. ಈಗ ಅವರು ಸಿಎಂ ಇವರು ಸಿಎಂ ಎಂದು ಹೇಳುವುದರಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗೋದಿಲ್ಲ ಎಂದರು. ಇನ್ನು ರಮೇಶ್ ಜಾರಕಿಹೊಳಿ ಆ್ಯಂಡ್ ಟೀಮ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.