ಕೂಗು ನಿಮ್ಮದು ಧ್ವನಿ ನಮ್ಮದು

ಜಿಲ್ಲಾ ವಿಭಜನೆಗೆ ನಾವು ಬದ್ಧ: ಸತೀಶ್ ಜಾರಕಿಹೊಳಿ

ಬೆಳಗಾವಿ: ಜಿಲ್ಲಾ ವಿಭಜನೆಗೆ ನಾವು ಬದ್ದ ಎಂದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲಾ ವಿಭಜನೆ ಆಗಲೇಬೇಕು ಅದರಲ್ಲಿ ಪ್ರಶ್ನೆ ಇಲ್ಲಾ. ನಾವು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ, ಒತ್ತಡ ಮಾಡುತ್ತೇವೆ. ಬಹಳದ ದೊಡ್ಡ ಜಿಲ್ಲೆ ಇದು, ಆಡಳಿತ ನಡೆಸುವುದು ಅಷ್ಟು ಸುಲಭ ಅಲ್ಲ. ಜಿಲ್ಲೆ ವಿಭಜನೆಯಾದರೂ ಮೂರು ಜಿಲ್ಲೆ ಒಳಗೆ ಎಂಟ್ರಿ ಇದೆ. ಗೋಕಾಕ್ ಆದ್ರೂ, ಚಿಕ್ಕೋಡಿ ಆದ್ರೂ ಮೂರು ಜಿಲ್ಲೆಯಾದ್ರೂ ನಂದು ಎಂಟ್ರಿ ಇದೆ.

ಜಿಲ್ಲಾ ವಿಭಜನೆ ಬೇಡಲು ಎಲ್ಲರಿಗೂ ಹಕ್ಕಿದೆ ಬೇಡಲಿ ಎಂದರು. ಸಭೆಗೆ ಬಿಜೆಪಿ ಶಾಸಕರ ಗೈರು ವಿಚಾರವಾಗಿ ಮಾತನಾಡಿದ ಅವರು, ಎನಾದ್ರೂ ಕೆಲಸ ಇದ್ದಿರಬೇಕು ಅದಕ್ಕೆ ಬಂದಿಲ್ಲ. ಅವರ ಪರವಾಗಿ ನಾನು ಚರ್ಚೆ ಮಾಡುತ್ತೇನೆ ಎಂದರು.

error: Content is protected !!