ಕೂಗು ನಿಮ್ಮದು ಧ್ವನಿ ನಮ್ಮದು

ಪಾಕಿಸ್ತಾನ ಜಿಂದಾಬಾದ್ ಅಂತಾ ಎಷ್ಟು ಸಲ ಕೂಗಲಾಗಿದೆ, ಎಷ್ಟು ಜನರನ್ನ ಬಂಧನ ಮಾಡಲಾಗಿದೆ: ಸಚಿವ ಲಾಡ್

ಹುಬ್ಬಳ್ಳಿ; ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರೇ ತಪ್ಪು ಮಾಡಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಖಡಕ್ ಉತ್ತರ ಕೊಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ನೇರವಾಗಿ ಹೇಳಿದ್ದಾರೆ. ಯಾರೇ ತಪ್ಪು ಮಾಡಲಿ ಕ್ರಮ ಗ್ಯಾರಂಟಿ. ಈ ಕುರಿತು ತನಿಖೆ ನಡೆತಾ ಇದೆ ಈಗಾಗಲೇ ಪಾಕಿಸ್ತಾನ ಜಿಂದಾಬಾದ್ ಕೂಗಿದ ಕುರಿತು ವಿಚಾರಣೆ ನಡೆತಾ ಇದೆ. ಅಲ್ಲದೇ ಸರ್ಕಾರ ಸ್ವಯಂ ಪ್ರೇರಿತ ಪ್ರಕರಣ ಎಂದು ತೆಗೆದುಕೊಂಡಿದೆ.

ತನಿಖೆ ನಡೆತಾ ಇದೆ ನಾವು ಅವರಿಗೆ ಒಂದು ಕೇಳುತ್ತೇವೆ, ಈ ಹಿಂದೆ ಎನ್ ಐಎ ಪ್ರಕರಣ ಕೇಸ್ ಆಗಿತ್ತು. ವಿಶೇಷವಾಗಿ ಪುಲ್ವಾಮಾ ಪ್ರಕರಣದಲ್ಲಿ ಅವರದೇ ಚಾರ್ಜ್ ಶೀಟ್ ಇದೆ. ಜಾರ್ಜ್ ಶೀಟ್ ನಲ್ಲಿ ಐವರ ಹೆಸರು ಮಾತ್ರ ಇದೆ. ಇನ್ನು ಉಳಿದ 15 ಜನರು ಯಾರು ಅಂತಾ ಕಂಡು ಹಿಡಿದಿಲ್ಲ. ಪ್ರಕರಣ ನಡೆದು ಐದು ವರ್ಷಗಳು ಆಯಿತು. ಈಗ ಅದರ ಬಗ್ಗೆ ಈಗ ಚರ್ಚೆ ಬೇಡವಾ ಎಂದ ಅವರು, ಸರ್ಕಾರ ಇದೆ,  ಅಲ್ಲಿ ಏನಾಗಿದೆ ಅದರ ಕುರಿತು ತನಿಖೆ ನಡೆಯುತ್ತಿರುವಾಗಲೇ ಸರ್ಕಾರ ವಜಾ ಮಾಡಿ ಎಂದರೆ ಏನು.?

ಆವಾಗ ಆರ್ ಡಿಎಕ್ಸ್ ಒಳಗಡೆ ಬಂದಾಗ ಅವರ ಸರ್ಕಾರವೇ ಇತ್ತು. ಅಂದು ಸರ್ಕಾರ ವಜಾ ಮಾಡಬಹುದಿತ್ತು ಅಲ್ವಾ ಎಂದ ಅವರು, ಆರ್ ಡಿ ಎಕ್ಸ್ ಒಳಗೆ ಹೇಗೆ ಬಂತು. ಒಂದಲ್ಲಾ ಎರಡಲ್ಲ ಮೂನ್ನೂರು ಕೆಜೆ ಆರ್ ಡಿ ಎಕ್ಸ್ ಬಂತು. ಈ ದೇಶದ ಒಳಗಡೆ ಮೂನ್ನೂರು ಕೀಲೋ ಹೇಗೆ ಬಂತು. ಅದಕ್ಕೆ ಕಾರಣ ಯಾರು? ಆವಾಗ ಯಾಕೆ ರಾಜೀನಾಮೆ ಕೇಳಲಿಲ್ಲ. ಪ್ರಧಾನಿ ಮಂತ್ರಿ ಅವರನ್ನು ರಾಜೀನಾಮೆ ಕೇಳಬೇಕಾಗಿತ್ತು, ಅದು
ಹೋಗಲಿ ರಕ್ಷಣಾ ಸಚಿವರನ್ನಾದರು ಕೇಳಬಹುದಿತ್ತು, ಎಂದು
ಪತ್ರಕರ್ತರಾದವರು ನೀವು ಮೊದಲು ಅವರನ್ನ ಕೇಳಿ.

ಮೊನ್ನೆ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಈ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತಾ ಇದೆ. ಇದರ ಬಗ್ಗೆ ಬಿಜೆಪಿ ಅವರದು ಹೋರಾಟ ಇಲ್ವಾ? ಈ ಪ್ರಶ್ನೆ ಅವರನ್ನ ಕೇಳಿದಿರಾ? ಅಂತಾ ಮರಳಿ ಪತ್ರಕರ್ತರನ್ನೇ ಪ್ರಶ್ನೆ ಮಾಡಿದ ಸಚಿವರು, ಅಂದು ಬೀದಿಗಳಿದು ಹೋರಾಟ ಮಾಡಬಹುದಿತ್ತು.‌ ಅದರ ಬಗ್ಗೆ ಸಹ ಅಧಿವೇಶನದಲ್ಲಿ ಕೂಗಬಹುದಿತ್ತು ಯಾಕೆ ಕೂಗಲಿಲ್ಲ?

ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದರೆ ನಡೆಯುತ್ತಾ? ಈ ದೇಶದಲ್ಲಿ 10 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ ಎಷ್ಟು ಪ್ರಕರಣಗಳಿವೆ. ಎಷ್ಟು ಜನರನ್ನು ಬಂಧನ ಮಾಡಿದ್ದಾರೆ? ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ. ಯಾರ ಪರವಾಗಿ ಇಲ್ಲ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತವೆ ಎಂದರು.

error: Content is protected !!