ಧಾರವಾಡ: ರಾಜ್ಯದ ಅನುದಾನಿತ ಪ್ರೌಢ ಹಾಗೂ ಪದವಿಪೂರ್ವ ಶಾಲೆ, ಕಾಲೇಜುಗಳಲ್ಲಿ 31-12-2015 ರ ಪೂರ್ವದಲ್ಲಿ ನಿವೃತ್ತಿ, ನಿಧನ ಹಾಗೂ ರಾಜೀನಾಮೆಯಿಂದ ಖಾಲಿ ಇದ್ದು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದು ಭರ್ತಿಮಾಡಿಕೊಂಡಿರುವ ಹುದ್ದೆಗಳನ್ನು ಅನುಮೋದನೆ ಮಾಡದಂತೆ ತಡೆಹಿಡಿಯಲು ಆದೇಶಿಸಿತ್ತು. ಈ ಕ್ರಮವನ್ನು ಸರಕಾರ ಪುನಃ ಪರಿಶೀಲಿಸಿ ಅನುಮೋಧನೆ ನೀಡುವ ಪ್ರಕ್ರಿಯೆಯನ್ನು ಮತ್ತೇ ಪ್ರಾರಂಭಿಸಬೇಕೆಂದು ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರುಗಳಿಗೆ ಸರಕಾರದ ಅಧೀನ ಕಾರ್ಯದರ್ಶಿಗಳು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ನೇಮಕಾತಿ ಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಂತುಹೋಗಿದ್ದನ್ನು ಆರ್ಥಿಕ ಇಲಾಖೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಬಾಕಿ ಉಳಿದಿರುವ 257 ಭೋದಕ ಹುದ್ದೆಗಳಿಗೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಬಾಕಿ ಉಳಿದ 173 ಭೋದಕ ಹುದ್ದೆಗಳಿಗೆ ಅನುಮೋದನೆ ನೀಡಿ ನೇಮಕಾತಿ ಆದೇಶ 2021-22 ಶೈಕ್ಷಣಿಕ ವರ್ಷ ಪ್ರಾರಂಭಗೊAಡ ನಂತರ ಜುಲೈ 2021 ರಲ್ಲಿ ನೀಡಲು ಸರಕಾರ ಸಹಮತಿಸಿರುವುದು. ಈ ಒಂದು ಆವೇಶದಿಂದ ಹಲವಾರು ತಿಂಗಳುಗಳಿಂದ ಆತಂಕಕ್ಕೆ ಒಳಗಾಗಿದ್ದ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಹಶಿಕ್ಷಕರು ಹಾಗೂ ಉಪನ್ಯಾಸಕರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ ಸರಕಾರದ ಈ ಕಾರ್ಯವನ್ನು ಶ್ಲಾಘೀಸಿದ್ದಾರೆ. ಇದಲ್ಲದೇ 2015ರ ನಂತರ ನಿವೃತ್ತಿಯಿಂದ ಖಾಲಿಯಿರುವ ಹುದ್ದೆಗಳಿಗೂ ಅನುಮತಿ ನೀಡಲು ಒತ್ತಾಯಿಸಿದ್ದಾರೆ.