ಕೂಗು ನಿಮ್ಮದು ಧ್ವನಿ ನಮ್ಮದು

ಯೋಗವನ್ನು ಕೊಡುವ ಮೂಲಕ ಜಗದ್ಗುರುವಾಗಿ ಇಂದು ಭಾರತ ವಿಜೃಂಭಿಸುತ್ತಿದೆ: ಸಂಜಯ್ ಪಾಟೀಲ್

ಬೆಳಗಾವಿ:ಪ್ರಪಂಚದ ಜನತೆಯ ದೀರ್ಘಾಯುಷ್ಯಕ್ಕೆ ಭಾರತೀಯರು ಆಯುರ್ವೇದದ ನಂತರ ಯೋಗವನ್ನು ಕೊಡುವ ಮೂಲಕ ಜಗದ್ಗುರುವಾಗಿ ಇಂದು ಭಾರತ ವಿಜೃಂಭಿಸುತ್ತಿದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು. ಸೋಮವಾರ ಯೋಗ ದಿನಾಚರಣೆ ಅಂಗವಾಗಿ ನೀಲಜಿ ಗ್ರಾಮದಲ್ಲಿ ಯೋಗ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಗ್ರಾಮೀಣ ಮತಕ್ಷೇತ್ರದ ಮುತಗಾ, ನಿಲಜಿ, ಶಿಂದೊಳ್ಳಿ, ಬಸರಿಕಟ್ಟಿ, ಸಾಂಬ್ರಾ, ಬಾಳೇಕುಂದ್ರಿ ಕೆಎಚ್ ಗ್ರಾಮಗಳಲ್ಲಿ ಕೋವಿಡ 19 ರೋಗದ ವಿರುದ್ದ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸಿರುವ ಆಶಾ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಆಹಾರ ಸಾಮಗ್ರಿಗಳ ಕಿಟ್, ಮತ್ತು ಕನೇರಿ ಮಠದ ಇಮ್ಯುನಿಟಿ ಬುಷ್ಟರ ಔಷಧ ವನ್ನು ನೀಡಿ ಮಾತನಾಡಿ, ಇಂದು ವಿದೇಶಗಳಲ್ಲಿ ಕೊವಿಡ್ ಕಾರಣದಿಂದ ಕೋಟ್ಯಾಂತರ ಜನ ಮರಣ ಸಂಭವಿಸಿದರು ಅತ್ಯಂತ ಜನದಟ್ಟನೆಯ ಭಾರತ ದೇಶದಲ್ಲಿ ಪ್ರಂಪಚದಲ್ಲಿಯೆ ಕೊವಿಡ್ ನಿಂದ ಸಾವಿನ ಸಂಖ್ಯೆ ಅತ್ಯಂತ ಕನಿಷ್ಠ ವಾಗಿರುವದಕ್ಕೆ ನಮ್ಮಲ್ಲಿರುವ ಯೋಗ ದೇಶದಲ್ಲಿರುವ ಆಯುರ್ವೇದ ಹಾಗೂ ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಮೋದಿಜಿಯವರ ನೀಡಿದ ಸುರಕ್ಷ ಕ್ರಮಗಳಿಂದ ಸಾವಿನ ಸಂಖ್ಯೆ ಭಾರತದಲ್ಲಿ ನಿಯಂತ್ರಣದಲ್ಲಿದೆ ಎಂದರು. ಯೋಗ ಒಂದು ಜೀವನದ ಕಲೆ ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಪ್ರಬುದ್ದತೆಯನ್ನು ಸಾಧಿಸಲು‌ ಸಾಧ್ಯವಾಗಲಿದೆ ಎಂದರು.

ಮುತಗಾ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ರವಿ ಕೊಟಬಾಗಿ, ಮಾತನಾಡಿ, ಕೊವಿಡ್ ಕಠಿಣ ಸಂದರ್ಭದಲ್ಲಿ ತಮ್ಮ ಸೇವೆ ನೀಡಿದ ಕೊವಿಡ್ ವಾರಿಯರ್ಸ್ ಕಾರ್ಯ ಶ್ಲಾಘನೀಯ ಇಂತಹ ಮಹನೀಯರನ್ನು ಸತ್ಕರಿಸಿ ಅವರಿಗೆ ನಮ್ಮ ಸ್ವಂತ ಹಣದಲ್ಲಿ ದಿನಸಿ ಕಿಟ್ ತಯಾರಿಸಿ ಅವರ ಸೇವೆಗೆ ನೀಡಿದ ಗೌರವವಾಗಿದೆ ಎಂದರು. ಇವರ ಈ ಕಾರ್ಯಕ್ಕೆ ಬಿಜೆಪಿ ಘಟಕ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ
ಸುಹಾಸ್ ಶಿರೋಡಕರ, ಮೀರಾ ದೇಶಪಾಂಡೆ, ವೀರೇಂದ್ರ ಪೂಜಾರಿ, ನಿತೀನ್ ಚೌಗುಲೆ, ಆಕಾಶ ಶೆಟ್ಟಿ, ರಾಜು ಕೊಡಬೊಲೆ, ವಿನಾಯಕ ಬಡಿಗೇರ, ಸಂದೀಪ್ ಸೋಮನಟ್ಟಿ, ಶ್ವೇತಾ ಜಗದಾಳೆ ಮತ್ತು ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!